ಹುಬ್ಬಳ್ಳಿ: 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಸುಂಧರಾ ಫೌಂಡೇಶನ್ ಹುಬ್ಬಳ್ಳಿ ಹಾಗೂ ಸೆಂಟರಿಂಗ್ ಮತ್ತು ಬಾರ್ ಬೆಂಡಿಂಗ್ ಕಾರ್ಮಿಕರ ಸಹಯೋಗದಲ್ಲಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಸ್ವರ್ಣಾ ಗ್ರೂಫ್ ಮಾಲೀಕರಾದ ಡಾ.ಸಿ.ಎಚ್. ವಿ.ಎಸ್.ವಿ. ಪ್ರಸಾದ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದಾನಗಳಲ್ಲಿ ರಕ್ತದಾನ ಶ್ರೇಷ್ಠ ರಕ್ತದಾನವಾಗಿದ್ದು, ಎಲ್ಲರೂ ಕೂಡ ರಕ್ತದಾನದಂತಹ ಮಹಾದಾನಕ್ಕೆ ಕೈ ಜೋಡಿಸಿ ಮತ್ತೊಬ್ಬರ ಜೀವವನ್ನು ಉಳಿಸುವ ಕಾರ್ಯ ಮಾಡಬೇಕಿದೆ. ಅಲ್ಲದೇ ಸ್ವಯಂ ಪ್ರೇರಿತರಾಗಿ ವಸುಂಧರಾ ಫೌಂಡೇಶನ್ ಹಾಗೂ ಬಾರ್ ಬೆಂಡಿಂಗ್ ಕಾರ್ಮಿಕ ಸಂಘಟನೆ ಇಂತಹ ಕಾರ್ಯಕ್ಕೆ ಕೈ ಹಾಕಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ಕೋವಿಡ್ ಕರಿನೆರಳಿನ ಭಯದಿಂದ ಯಾರು ಕೂಡ ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ರಕ್ತದಾನದಂತಹ ಶಿಬಿರಗಳು ವಿಶೇಷ ಪಾತ್ರ ನಿರ್ವಹಿಸುತ್ತವೆ.
Kshetra Samachara
15/08/2021 06:35 pm