ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೋವಿಡ್ ತ್ಯಾಜ್ಯ ವಿಲೇವಾರಿಗೆ ಮುನ್ನೆಚ್ಚರಿಕೆ ವಹಿಸಿದ ಜಿಲ್ಲಾಡಳಿತ:140 ಟನ್ ಜೈವಿಕ ವಿಲೇವಾರಿ

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಬಂದಾಗಿನಿಂದ ಕೋವಿಡ್ ಜೈವಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ಎಲ್ಲೆಡೆ ಒಂದು ಸವಾಲಾಗಿತ್ತು.

ಆದರೆ ಧಾರವಾಡ ಜಿಲ್ಲಾಡಳಿತ ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 140 ಟನ್ ಜೈವಿಕ ತ್ಯಾಜ್ಯವನ್ನು ಪ್ರತ್ಯೇಕ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಿಸಿದ್ದು, ಆ ತ್ಯಾಜ್ಯದಿಂದ ಯಾವುದೇ ರೋಗ ಹರಡದಂತೆ ಮುನ್ನೇಚ್ಚರಿಕೆ ವಹಿಸಿದೆ.

ಕೋವಿಡ್ ಕಾರಣದಿಂದ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರಿಂದ ಉತ್ಪಾದನೆಯಾದ ತ್ಯಾಜ್ಯವನ್ನು ಬಯೋ ಮೆಡಿಕಲ್ ತ್ಯಾಜ್ಯ ಎಂದೇ ಪರಿಗಣಿಸಲಾಗುತ್ತಿದೆ. ಆ ಅಪಾಯಕಾರಿ ತ್ಯಾಜ್ಯವನ್ನು ಸರಕಾರದ ನಿರ್ಧಿಷ್ಟ ಮಾರ್ಗಸೂಚಿಯ ಪ್ರಕಾರವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

ಮಾರ್ಚ ತಿಂಗಳಿದ ಇಲ್ಲಿಯವರೆಗೂ ಅಂದರೇ ಸೆ.17ರ ವರೆಗೆ ಪ್ರತಿ ನಿತ್ಯ ಅಂದಾಜು 1200ರಿಂದ 1500 ಕೆಜಿಯಷ್ಟು ಕೋವಿಡ್ ತ್ಯಾಜ್ಯ ಸಂಗ್ರಹ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

ಕೊರೊನಾದ ಆರಂಭದಲ್ಲಿ ದಿನವೊಂದಕ್ಕೆ ಕೇವಲ 50 ರಿಂದ 100 ಕೆಜಿಯಷ್ಟು ಬಯೋ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಾಗುತ್ತಿತ್ತು. ಆದರೆ ಕೊವಿಡ್ ಹಾವಳಿ ಅಧಿಕಗೊಂಡಂತೆ ಇಂದು ದಿನಕ್ಕೆ 1500 ಕೆಜಿ ವರೆಗೂ ಸಂಗ್ರಹವಾಗುತ್ತಿದೆ.

ಕೊರೊನಾ ಸೋಂಕಿತರು ಬಳಸಿದ ಊಟದ ತಟ್ಟೆ, ಲೋಟ (ಥರ್ಮಲ್), ಮಾಸ್ಕ್, ಬಟ್ಟೆ, ಟೂಥ್ ಬ್ರಸ್, ಸಾನಿಟೈಸರ್ ಖಾಲಿ ಬಾಟಲ್‌ಗಳು. ಸೋಂಕಿತರ ಚಿಕಿತ್ಸೆಗೆ ವೈದ್ಯರು ಮತ್ತು ನರ್ಸ್ಗಳು ಬಳಸಿದ ಪಿಪಿಇ ಕಿಟ್, ಗುಳಿಗೆಗಳ ಸ್ಯಾಚೆಟ್, ಚುಚ್ಚುಮದ್ದು, ಹ್ಯಾಂಡ್ ಗ್ಲೌಸ್ ಮಾತ್ರವಲ್ಲದೇ ಒಳಗಡೆ ಬಳಸಿದ ಕೈಗವಸುಗಳು ಸೇರಿದಂತೆ ಇತರ ತ್ಯಾಜ್ಯವು ಈ ಬಯೋ ತ್ಯಾಜ್ಯದಲ್ಲಿ ಒಳಗೊಂಡಿದೆ.

ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಮಹತ್ವದ ಪಾತ್ರವಹಿಸಿದ್ದು,ಕೋವಿಡ್ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ವ್ಯವಸ್ಥಿತ ನಿರ್ದೇಶನಗಳನ್ನು ಕೈಗೊಂಡಿರುವ ಜಿಲ್ಲಾಡಳಿತದ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದ್ದು,ಇನ್ನೂ ಉತ್ಕೃಷ್ಟ ಮಟ್ಟದಲ್ಲಿ ಕೊರೋನಾ ನಿಯಂತ್ರಣ ಮಾಡಲಿ ಎಂಬುವುದು ಸಾರ್ವಜನಿಕರ ಆಶಯವಾಗಿದೆ.

Edited By :
Kshetra Samachara

Kshetra Samachara

20/09/2020 03:49 pm

Cinque Terre

47.47 K

Cinque Terre

2

ಸಂಬಂಧಿತ ಸುದ್ದಿ