ನವಲಗುಂದ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸುಲ್ತಾನ್ ಸೌಹಾರ್ದ ಕಮಿಟಿಯು ನವಲಗುಂದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಡಿ ಎಮ್ ಓ ಡಾ.ಮಂಜುನಾಥ ಸೂಪ್ಪಿಮಠ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ.ಮಂಜುನಾಥ ಸೂಪ್ಪಿಮಠ, ಇವತ್ತು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತೇ, ಅಂತಹ ಸಂದರ್ಭದಲ್ಲಿ ನೀವು ನೀಡಿರುವಂತಹ ರಕ್ತ ಅವರ ಬದುಕಿಗೆ ಅನಕೂಲವಾಗುತ್ತದೆ. ಮನುಷ್ಯನಿಗೆ ಅತೀ ಮುಖ್ಯವಾಗಿ ಬೇಕಾಗಿರುವಂತಹ ರಕ್ತವನ್ನು ದಾನ ಮಾಡುವುದರಿಂದ ಇದಕ್ಕಿಂತ ಶ್ರೇಷ್ಠವಾದ ದಾನ ಯಾವುದು ಇಲ್ಲಾ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವಕರು ರಕ್ತವನ್ನು ದಾನ ಮಾಡಿದರು. ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ರಾಮಕೃಷ್ಣ, ಪ್ರೇಮ್ ಬಿಂದು ಬ್ಲಡ್ ಬ್ಯಾಂಕ್ ನ ಡಾ. ವಿ ಎಮ್ ಹಿರೇಮಠ, ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ಮುಸ್ಲಿಂ ಸಮಾಜದ ಯುವ ಮುಖಂಡ ಅನ್ವರ ಮೂಲಿಮನಿ, ಇಮ್ತಿಯಾಜ್ ಜಮಖಾನ್, ಮಹಮ್ಮದ್ ಮಟಗೇರ, ಶಾನು ಧಾರವಾಡ, ಅಲ್ತಾಪ್ ಕೆರೂರ್, ನಿಜಾಮುದ್ದಿನ ಧಾರವಾಡ, ಫಾರುಕ ಜಮಖಾನ, ಯಾಸಿನ್ ಮೂಲಿಮನಿ, ಇಮಾಮ್ ಕರ್ನಾಚಿ, ರಿಯಾಜ್ ಅಲ್ಲಿಬಾಯಿ, ಜಿಲಾನಿ ಮಕಾಂದಾರ, ಶಮಸುದ್ದಿನ್ ಧಾರವಾಡ, ಆಶೀಪ್ ನದಾಫ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
Kshetra Samachara
08/10/2022 03:43 pm