ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವ ದಾದಿಯರ ದಿನವನ್ನ ಅರ್ಥಪೂರ್ಣವಾಗಿ ಆಚರಿಸಿದ ಕಿಮ್ಸ್ ಶುಶ್ರೂಷಕಿಯರು

ಹುಬ್ಬಳ್ಳಿ: ಇಡೀ ಪ್ರಪಂಚವೆ ಸಂಕಷ್ಟದಲ್ಲಿರುವಾಗ ಧೈರ್ಯ ತುಂಬಿದಾಕೆ ದಾದಿ, ಬದುಕಿನ ಭರವಸೆ ಕಳೆದುಕೊಂಡು ಕೈಚೆಲ್ಲಿ ಕುಳಿತಾಗ ಆಸರೆಯಾದವಳು ದಾದಿ, ಕಾಲ ಚಕ್ರದ ಜತೆ ಪೈಪೋಟಿಗಿಳಿದು ಜನರ ಆರೋಗ್ಯವನ್ನು ಕಾಪಾಡಿದವಳು ದಾದಿ. ಕೊರೊನಾ ಎಂಬ ರೋಗ ಬಂದು ಸಂಬಂಧಗಳನ್ನೇ ಮರೆತಿರುವಾಗ ಬಂಧುವಂತೆ ಆರೈಕೆ ಮಾಡಿದವಳ ದಿನ ಇಂದು. ಇಂತಹ ವಿಶ್ವ ದಾದಿಯರ ದಿನವನ್ನು ಇಂದು ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಸುದ್ದಿಗಾಗಿ ನೀನು ಸೇವೆ ಮಾಡಬೇಡ, ಸೇವೆ ಮಾಡಿ ಸುದ್ದಿಯಾಗಬೇಡ. ಸದ್ದಿಲ್ಲದೇ ಸೇವೆ ಮಾಡು ಎಂಬ ಮಹಾತಾಯಿ ಮದರ್ ಥೆರೇಸಾ ಮಾತಿನಂತೆಯೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದಾದಿಯರು ನಡೆದುಕೊಳ್ಳುತ್ತಿದ್ದಾರೆ. ಅದರಂತೆ ಇಂದು ಹುಬ್ಬಳ್ಳಿಯ ಕಿಮ್ಸ್ ನ ದಾದಿಯರು ವೃದ್ಧಾಶ್ರಮದಲ್ಲಿ ವಿಭಿನ್ನವಾಗಿ ಈ ದಿನವನ್ನು ಆಚರಣೆ ಮಾಡಿದರು.

ಉತ್ತರ ಕರ್ನಾಟಕ ಸಂಜೀವಿನಿ ಎಂಬ ಖ್ಯಾತಿ ಪಡೆದಿರುವ ಕಿಮ್ಸ್ ನ ತುರ್ತು ಚಿಕಿತ್ಸಾ ಘಟಕದ ದಾದಿಯರು ಇಂದು ಹಿರಿಯ ಶುಶ್ರೂಷಾ ಅಧಿಕಾರಿ ಸುನಿತಾ ನಾಯಕ ಅವರ ನೇತೃತ್ವದಲ್ಲಿ ನೈಟಿಂಗೇಲ್ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ಆಶ್ರಮದಲ್ಲಿನ ಹಿರಿಯ ಜೀವಗಳೊಂದಿಗೆ ಕೇಕ್ ಕತ್ತರಿಸಿ, ಅವರ ಆರೋಗ್ಯ ತಪಾಸಣೆ ಮಾಡುವ ಮೂಲಕ ವಿಶ್ವ ದಾದಿಯರ ದಿನವನ್ನು ಸೆಲೆಬ್ರೇಟ್ ಮಾಡಿದರು.

ಶುಶ್ರೂಷಕಿಯರು ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗ, ಒಬ್ಬ ನರ್ಸ್ ತಾನು ಆರೈಕೆ ಮಾಡೋ ರೋಗಿ ಯಾವ ಜಾತಿ, ಯಾವ ಧರ್ಮ, ಯಾವ ಪಕ್ಷ, ಯಾವ ಊರು ಎಂಬೆಲ್ಲಾ ವಿಚಾರದ ಬಗ್ಗೆ ನೋಡುವುದೇ ಇಲ್ಲ. ರೋಗಿ ಯಾರೇ ಇರಲಿ, ಅವರನ್ನು ಮಗುವಿನಂತೆ ಆರೈಕೆ ಮಾಡಿ ಹುಷಾರಾಗಿಸಿ, ಮನೆಗೆ ಕಳುಹಿಸೋದಷ್ಟೇ ಅವರ ಏಕೈಕ ಗುರಿಯಾಗಿರುತ್ತದೆ. ಅಂತಹ ದಾದಿಯರ ದಿನವನ್ನು ಹುಬ್ಬಳ್ಳಿಯಲ್ಲಿ ಮೈತ್ರಿ ವೃದ್ಧಾಶ್ರಮದಲ್ಲಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದೇ ರೀತಿಯಾಗಿ ದಾದಿಯರ ಕೆಲಸ ಹೀಗೆ ಮುಂದುವರೆಯಲಿ ಎಂಬುದೇ ನಮ್ಮ ಆಶಯ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Shivu K
Kshetra Samachara

Kshetra Samachara

13/05/2022 11:32 am

Cinque Terre

36.69 K

Cinque Terre

0

ಸಂಬಂಧಿತ ಸುದ್ದಿ