ಹುಬ್ಬಳ್ಳಿ : ಕಿಮ್ಸ್ ಆಡಳಿತಾಧಿಕಾರಿ ಕುರ್ಚಿಗೆ ಅಧಿಕಾರಿಗಳ ಕಿತ್ತಾಟಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಬ್ಬರ ಕಿತ್ತಾಟದಲ್ಲಿ ಮೂರನೇಯವರಿಗೆ ಲಾಭವಾಗಿದ್ದು, ಅಂತೂ ಇಂತೂ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿಯಿಂದ ಕುರ್ಚಿ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದೆ.
ಹೌದು... ಕಿಮ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಸುಮಾ ಗುಮಾಸ್ತೆ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದಾರೆ. ಫೆಬ್ರವರಿ 5 ರಂದು ಇಸ್ಮಾಯಿಲ್ ಸಾಬ್ ಶಿರಹಟ್ಟಿಯನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ವರ್ಗಾಯಿಸಿತ್ತು.
ಕಳೆದ 3 ದಿನಗಳಿಂದ ಕಿಮ್ಸ್ ಆಡಳಿತ ಕಚೇರಿಗೆ ಶಿರಹಟ್ಟಿ ಅಲೆದಾಡುತ್ತಿದ್ದರು. ಆದರೆ ಅಧಿಕಾರ ಹಸ್ತಾಂತರ ಮಾಡದೆ ಈ ಹಿಂದಿದ್ದ ಅಧಿಕಾರಿ ರಾಜಶ್ರೀ ಜೈನಾಪುರ ರಜೆಯಲ್ಲಿದ್ದಾರೆ.
ಇದೀಗ ಯಾವುದೇ ಆದೇಶ ಇಲ್ಲದಿದ್ದರೂ ಕಿಮ್ಸ್ ನ ಸಿಬ್ಬಂದಿಯನ್ನೇ ಹಂಗಾಮಿ ಆಡಳಿತಾಧಿಕಾರಿಯಾಗಿಯನ್ನಾಗಿ ನೇಮಕ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
Kshetra Samachara
12/02/2022 10:45 am