ನವಲಗುಂದ : ನವಲಗುಂದ ತಾಲೂಕಿನ ಭೋಗಾನೂರ ಗ್ರಾಮದ ಸರ್ಕಾರಿ ಹಿರಿಯರು ಪ್ರಾಥಮಿಕ ಶಾಲೆಯಲ್ಲಿ 16 ವಿದ್ಯಾರ್ಥಿಗಳಿಗೆ ಈಗಾಗಲೇ ಸೋಂಕು ದೃಢ ಪಟ್ಟಿದ್ದು, ಶಾಲೆಯನ್ನು ಏಳು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿಯಿಂದ ಮಾಹಿತಿ ದೊರೆತಿದೆ.
ಹೌದು ನವಲಗುಂದ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಹೆಚ್ಚಾಗುತ್ತಿದ್ದು, ಶಾಲೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಆದರೆ ಇದರಿಂದ ಯಾವ ವಿದ್ಯಾರ್ಥಿಗಳು, ಪಾಲಕರು ಮತ್ತು ಸಿಬ್ಬಂದಿ ವರ್ಗ ಆತಂಕಕ್ಕೋಳಗಾಗದೆ ಧೈರ್ಯದಿಂದ ಇರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಿದ್ದಪ್ಪ ಮಾಯಾಚಾರ್ಯ ಅವರು ತಿಳಿಸಿದರು.
Kshetra Samachara
02/02/2022 02:28 pm