ನವಲಗುಂದ : ನವಲಗುಂದ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯಕ್ಕೂ ಈಗ ಕೋವಿಡ್ ಸೋಂಕು ದೃಢ ಪಟ್ಟಿದ್ದು, ಪ್ರಭಾರಿ ನವಲಗುಂದ ತಾಲೂಕಾ ದಂಡಾಧಿಕಾರಿಗಳಾದ ಪ್ರವೀಣ್ ಹುಚ್ಚಣ್ಣವರ ಸೇರಿದಂತೆ ಮೂವರಿಗೆ ಸೋಂಕು ದೃಢ ಪಟ್ಟಿದೆ. ಈ ಹಿನ್ನೆಲೆ ಶುಕ್ರವಾರ ತಹಶೀಲ್ದಾರ್ ಕಾರ್ಯಾಲಯಕ್ಕೆ ಸ್ಯಾನಿಟೈಸಿಂಗ್ ಮಾಡಲಾಯಿತು.
ಎಸ್..! ತಾಲೂಕಿನಾದ್ಯಂತ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ತಾಲೂಕಾಡಳಿತ ವತಿಯಿಂದ ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡರು ಸಹ ಈಗ ಮಹಾಮಾರಿ ತಾಲೂಕಾ ದಂಡಧಿಕಾರಿಗಳ ಕಾರ್ಯಾಲಯಕ್ಕೆ ಒಕ್ಕರಿಸಿದ್ದು, ಸಂಪೂರ್ಣ ಕಾರ್ಯಾಲಯ ಸ್ಯಾನಿಟೈಸಿಂಗ್ ಮಾಡಲಾಯಿತು.
Kshetra Samachara
28/01/2022 02:18 pm