ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮದುವೆಗೆ ಬಂದವರಿಗೂ ಇದೀಗ ಕೊರೊನಾ ಕಂಟಕ

ಧಾರವಾಡ: ಧಾರವಾಡ ಎಸ್‌ಡಿಎಂ ಆಸ್ಪತ್ರೆಯಲ್ಲಿ ನಿನ್ನೆ 66 ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಮಧ್ಯರಾತ್ರಿವರೆಗೆ 700 ಜನರ ತಪಾಸಣೆ ಮಾಡಿದ್ದೇವೆ. ಅದರಲ್ಲಿ 166 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಈಗ ಸೋಂಕಿತರ ಸಂಖ್ಯೆ 182 ಆಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ. ಎಲ್ಲ ಸಿಬ್ಬಂದಿಗೆ ತಪಾಸಣೆ ಮಾಡಲಾಗುವುದು. ಸುಮಾರು 3,500 ಮಂದಿಯ ಟೆಸ್ಟ್ ಮಾಡಲಿದ್ದು, ಎಲ್ಲರ ರಿಸಲ್ಟ್ ಬರಬೇಕಿದೆ. ಅಲ್ಲಿಯವರೆಗೆ ಜನರ ಭೇಟಿ ನಿರ್ಬಂಧಿಸಲು ಸೂಚಿಸಿದ್ದೇವೆ. ರೋಗಿಗಳ ಅಂಟೆಂಡರ್‌ಗಳಿಗೂ ನಿಯಂತ್ರಣ ಹಾಕಲು ಹೇಳಿದ್ದೇವೆ. ಎಮರ್ಜೆನ್ಸಿ ಕೇಸ್ ಮಾತ್ರ ತೆಗೆದುಕೊಳ್ಳಲು ಹೇಳಿದ್ದೇವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಸುತ್ತಮುತ್ತಲಿನ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿದ್ದೇವೆ. ಇದು 500 ಮೀಟರ್ ವ್ಯಾಪ್ತಿಯ ಶಾಲೆಗಳಿಗೆ ಅನ್ವಯಿಸುತ್ತದೆ‌. ಈಗಾಗಲೇ 1,500 ಜನರ ಟೆಸ್ಟ್ ಆಗಿದೆ. ಇನ್ನೂ 2,500 ಜನರ ಟೆಸ್ಟ್ ಇವತ್ತು ಮುಗಿಸುತ್ತೇವೆ. ನಾಳೆಯೊಳಗೆ ಎಲ್ಲರ ರಿಸಲ್ಟ್ ಬರಲಿದೆ. ಡಿಮಾನ್ಸ್, ಕಿಮ್ಸ್, ಎಸ್‌ಡಿಎಂ ಲ್ಯಾಬ್ ಟೆಸ್ಟ್‌ ನಡೆಸಲು ಬಳಸುತ್ತಿದ್ದೇವೆ ಎಂದರು.

ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸ್ಫೋಟದ ಹಿನ್ನೆಲೆಯಲ್ಲಿ ಮದುವೆಗೂ ಕಂಟಕ ಎದುರಾಗಿದೆ. ಮೆಡಿಕಲ್ ಕಾಲೇಜಿನ 182 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲ‌ ಒಂದೇ ಸಮಾರಂಭದಲ್ಲಿ‌ ಭಾಗಿಯಾದವರು ಎಂದು ಡಿಸಿ ಮಾಹಿತಿ ನೀಡಿದ್ದಾರೆ.

ನ‌.17ರಂದು ನಡೆದಿದ್ದ ಸಮಾರಂಭ ಬಳಿಕ ಅದೇ ಸಭಾಭವನದಲ್ಲಿ ಮದುವೆಯೊಂದು ನಡೆದಿದೆ. ನ.19ರಂದು ಅದ್ಧೂರಿ ಮದುವೆ ನಡೆದಿತ್ತು. ಸದ್ಯ ಮದುವೆಗೆ ಬಂದವರ ಪತ್ತೆಗೆ ಜಿಲ್ಲಾಡಳಿತ ಮುಂದಾಗಿದೆ. ಮದುವೆ ಮನೆಯವರನ್ನೂ ಸಂಪರ್ಕಿಸಿ ತಪಾಸಣೆ ಮಾಡಲು ನಿರ್ಧಾರ ಮಾಡಲಾಗಿದೆ. ಕಾಲೇಜು ಕ್ಯಾಂಪಸ್‌ನಲ್ಲೇ ಇರುವ ಸಭಾಭವನದಲ್ಲಿ ನಡೆದ ಮದುವೆಗೂ ಈಗ ಕಂಟಕ‌ ಎದುರಾಗಿದೆ.‌

Edited By : Shivu K
Kshetra Samachara

Kshetra Samachara

26/11/2021 03:38 pm

Cinque Terre

47.16 K

Cinque Terre

8

ಸಂಬಂಧಿತ ಸುದ್ದಿ