ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂಬ ನೆಮ್ಮದಿಯಲ್ಲಿರುವಾಗಲೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಸಮೀಪದ ಎಸ್ ಡಿಎಂ ಮಡಿಕಲ್ ಕಾಲೇಜಿನ 84 ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ 12 ಜನ ಸಿಬ್ಬಂದಿಯಲ್ಲಿ ಕೊರೊನಾ ಪೊಸಿಟಿವ್ ಪತ್ತೆಯಾಗಿದ್ದು ಆತಂಕ ಮೂಡಿಸಿದೆ.
ಕಾಲೇಜ್ ಹಾಸ್ಟೇಲ್ ಸೀಲ್ ಡೌನ್ ಮಾಡಲಾಗಿದೆಯಲ್ಲದೆ ಕ್ಯಾಂಪಸ್ ದಿ. 26 ರಂದು ಹಮ್ಮಿಕೊಂಡಿದ್ದ ಮೆಡಿಕಲ್ ಕೇರ್ ರಿವ್ಯೂ ಮೀಟಿಂಗ್ ಹಾಗೂ ಚಿಂತನ ಕಾರ್ಯಕ್ರಮ ಮತ್ತು ದಿ. 27 ರಂದು ನಡೆಯಲಿದ್ದ ಕ್ಲಿನಿಕಲ್ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ನವೆಂಬರ 18,19 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭಧ ನಂತರ ಕೆಲವ ವಿದ್ಯಾರ್ಥಿಗಳಲ್ಲಿ ಕೊರೊನಾ ಲಕ್ಷಣದಗಳು ಕಂಡು ಬಂದಿದ್ದರಿಂದ ಕೆಲವರನ್ನು ಪರೀಕ್ಷೆಗೊಳಪಡಿಸಿದಾಗ 84 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಕಂಡುಬಂದಿದೆ.
ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿದ್ದರೂ ಸಹ ವಿದ್ಯಾರ್ಥಿಗಳನ್ನು ಕೊರೊನಾ ಪಾಸಿಟಿವ್ ಕಂಡುಬಂದಿದ್ದು ಆಶ್ಚರ್ಯ ಮೂಡಿಸಿದೆ.
ಕಾಲೇಜ್ ಕ್ಯಾಂಪಸ್ ದಲ್ಲಿ ಆತಂಕ ಸೃಷ್ಟಿಯಾಗಿದ್ದು, ಇನ್ನುಳಿದ 300 ವಿದ್ಯಾರ್ಥಿಗಳ ಕೊರೊನಾ ಟೆಸ್ಟ್ ಆರಂಭವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Kshetra Samachara
25/11/2021 01:42 pm