ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: AyurExpo 2022 : ಆಯುರ್ವೇದದ ಸಮಗ್ರ ಮಾಹಿತಿ ಮತ್ತು ಪ್ರದರ್ಶನ ನಾಳೆಯಿಂದ ಶುರು

ಹುಬ್ಬಳ್ಳಿ: ಆಯುರ್ವೇದ ನಮ್ಮ ದೇಶದ ಮೂಲ ವೈದ್ಯ ವಿಜ್ಞಾನ. ಸರ್ವ ರೋಗಕ್ಕೂ ಆಯುರ್ವೇದದಲ್ಲಿ ಚಿಕಿತ್ಸೆಯೂ ಇದೆ. ಔಷಧಿಯೂ ಇದೆ. ಆದರೆ ನಮ್ಮ ನಡುವೆ ಇಂಗ್ಲೀಷ್ ಮೆಡಿಸಿನ್‌ಗಳು ಬಂದು ತಮ್ಮ ಸ್ಥಾನ‌ ಗಟ್ಟಿ ಮಾಡಿಕೊಂಡಿವೆ.

ಆಯುರ್ವೇದ ಸುಖಾಸುಮ್ಮನೇ ಬಂದಿದ್ದಲ್ಲ. ಹತ್ತಾರು ವರ್ಷಗಳ ಸಂಶೋಧನೆ, ಪ್ರಯೋಗ, ಹಾಗೂ ಸಕಾರಾತ್ಮಕ ಫಲಿತಾಂಶದ ಮೂಲಕ ಬಳಕೆಗೆ ಬಂದಿದೆ. ಆದ್ರೆ ಭಾರತೀಯರಾದ ನಾವೇ ಆಯುರ್ವೇದ ವೈದ್ಯ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸುತ್ತಿಲ್ಲ. ಹೀಗಾಗಿ ಮೂಲ ಆಯುರ್ವೇದದ ಮಹತ್ವ ಹಾಗೂ ಅಗತ್ಯತೆಯನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ 2022ರ ಆಯುರ್ವೇದ ಎಕ್ಸ್‌ಪೋ ಮೇಳ ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸವೇಶ್ವರ ನಗರದಲ್ಲಿರುವ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಈ ಆಯುರ್ ಎಕ್ಸ್‌ಪೋ ನಡೆಯಲಿದೆ. ಏಪ್ರಿಲ್ 23, 24, & 25 ರಂದು‌ ಮೂರು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ.

ಇನ್ನು ಪ್ರದಶನದ ವಿಶೇಷತೆಗಳನ್ನು ನೋಡೋದಾದ್ರೆ, ಆಯುರ್ವೇದದ ವಿವಿಧ ಚಿಕಿತ್ಸಾ ಪದ್ಧತಿಗಳ ಪ್ರದರ್ಶನ, ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಔಷಧಿ ಸಸ್ಯಗಳ ಪ್ರದರ್ಶನ, ಯೋಗಾಸನ‌ ಪ್ರದರ್ಶನಗಳು ನಡೆಯಲಿವೆ.

ಇದರೊಂದಿಗೆ ವಿವಿಧ ಕ್ಷೇತ್ರಗಳ ಉತ್ತಮ ವಾಗ್ಮಿಗಳಿಂದ ಉಪನ್ಯಾಸ, ವಿವಿಧ ಆಯುರ್ವೇದ ಉಪಕರಣಗಳು, ಗ್ರಂಥಗಳು, ಹಾಗೂ ಔಷಧಿಗಳ‌ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಇದೇ ವೇಳೆ ಬಾಲರೋಗ ವಿಭಾಗದಿಂದ ಆರೋಗ್ಯವಂತ ಮಗು ಸ್ಪರ್ಧೆ ಆಯೋಜಿಸಲಾಗಿದೆ.‌ ಒಟ್ಟು ಮೂರು ಸುತ್ತಿನಲ್ಲಿ ಈ ಸ್ಪರ್ಧೆ ನಡೆಯಲಿದೆ.

ಇದರೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ poster presentation ಹಾಗೂ model making ಮತ್ತು ಆಯುರ್ವೇದ ವೈದ್ಯ ವಿಜ್ಞಾನ ಕುರಿತು ಚರ್ಚಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಮತ್ತೊಂದು ವಿಶೇಷ ಅಂದ್ರೆ ಸಾವಯವ ಖಾದ್ಯಗಳ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನಕ್ಕೆ ಸರ್ವರಿಗೂ ಉಚಿತ ಪ್ರವೇಶ ಇದೆ. ಬನ್ನಿ ಪಾಲ್ಗೊಳ್ಳಿ, ನಮ್ಮ ದೇಶದ ಮೂಲ ವೈದ್ಯ ಪದ್ಧತಿಯಾದ ಆಯುರ್ವೇದದ ಬಗ್ಗೆ ಮಾಹಿತಿ ಪಡೆಯಿರಿ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನತೆಗೆ 2022ರ ಆಯುರ್ ಎಕ್ಸ್‌ಪೋ ಗೆ ಸ್ವಾಗತ.

Edited By : Manjunath H D
Kshetra Samachara

Kshetra Samachara

22/04/2022 04:57 pm

Cinque Terre

35.28 K

Cinque Terre

7

ಸಂಬಂಧಿತ ಸುದ್ದಿ