ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಿಶ್ವ ವಿಕಲಚೇತನ ದಿನ ಮತ್ತು ಏಡ್ಸ್ ಜಾಗೃತಿ ಜಾಥಾ ಸಂಚಾರ

ಕುಂದಗೋಳ : ಪಟ್ಟಣದ ಕೋರ್ಟ್ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನ ಹಾಗೂ ಏಡ್ಸ್ ದಿನಾಚರಣೆ ಕಾರ್ಯಕ್ರಮ ನೆರವೇರಿತು.

ಸಿವಿಲ್ ನ್ಯಾಯಾಧೀಶೆ ಶೈನಿ ಕೆ.ಎಂ ಕಾರ್ಯಕ್ರಮದ ಜಾಥಾಗೆ ಚಾಲನೆ ನೀಡಿ ವಿಶ್ವ ವಿಕಲಚೇತನರ ದಿನಾಚರಣೆ ವಿಕಲಚೇತನರ ಅಭಿವೃದ್ಧಿಗೆ ಪೂರಕವಾಗಿ ಬೇಕು, ವಿಶ್ವ ಏಡ್ಸ್ ದಿನಾಚರಣೆ ಲೈಂಗಿಕ ಕ್ರಿಯೆಯಲ್ಲಿ ವಹಿಸಬೇಕಾದ ಎಚ್ಚರಿಕೆ ತಿಳಿಸುತ್ತದೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡದೇ ಆರೋಗ್ಯದ ದೃಷ್ಟಿಯಿಂದ ಹಾಗೂ ರೋಗದ ದೃಷ್ಟಿಯಿಂದ ಪ್ರತಿಯೊಬ್ಬರು ಜಾಗೃತರಾಗಿರುವುದು ಅವಶ್ಯ ಎಂದರು.

ಸಿವಿಲ್ ನ್ಯಾಯಾಧೀಶ ರವಿ ಬಾಬು ಚಹ್ವಾಣ್ ಹಾಗೂ ಇತರ ಅಧಿಕಾರಿಗಳು ಮಾತನಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಬಳಿಕ ಅಂಗನವಾಡಿ ಕಾರ್ಯಕರ್ತೆಯರ ನೇತೃತ್ವದಲ್ಲಿ ವಿಶ್ವ ವಿಕಲಚೇತನ ಹಾಗೂ ಏಡ್ಸ್ ದಿನಾಚರಣೆ ನಾಮಫಲಕ ಹಿಡಿದು ಪಟ್ಟಣದ ಎಲ್ಲೆಡೇ ಸಂಚರಿಸಿ ಜಾಗೃತಿ ಜಾಥಾ ಮಾಡಲಾಯಿತು.

Edited By : Nagesh Gaonkar
Kshetra Samachara

Kshetra Samachara

16/12/2020 03:10 pm

Cinque Terre

23.18 K

Cinque Terre

2

ಸಂಬಂಧಿತ ಸುದ್ದಿ