ಕಲಘಟಗಿ:ಕೋವಿಡ್-19 ಲಸಿಕೆಯನ್ನು ಪರಿಚಯಿಸುತ್ತಿರುವ ಹಿನ್ನಲೆಯಲ್ಲಿ ಸರಕಾರದ ಆದೇಶದನ್ವಯ
ತಾಲೂಕಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಿದ್ದು,ಮೊದಲ ಸಭೆಯನ್ನು ತಾಲೂಕಾ ಆರೋಗ್ಯಾಧಿಕಾರಿಗಳ ಸಭಾಭವನದಲ್ಲಿ ನಡೆಸಲಾಯಿತು.
ಮೊದಲ ಹಂತದಲ್ಲಿ ಕೋವಿಡ್-19 ವಾರಿಯರ್ಸ್ ಗಳಿಗೆ ಲಸಿಕೆಯನ್ನು ಕೊಡಲು ಸರಕಾರ ನಿರ್ಧರಿಸಿರುವುದರಿಂದ,ಪೂರ್ವ ಸಿದ್ಧತೆಗಳಾದ ಲಸಿಕಾ ಸಂಗ್ರಹಣೆಯ ವ್ಯವಸ್ಥೆ,ಆರೋಗ್ಯ ಕಾರ್ಯಕರ್ತರ ಕುರಿತು ಚರ್ಚೆ ಮಾಡಲಾಯಿತು.
ತಾಲೂಕಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ ಅಶೋಕ ಶಿಗ್ಗಾವಿ,ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಎಸ್ ಎಮ್ ಹೊನಕೇರಿ,ತಾಲೂಕಾ ಆರೋಗ್ಯ ಅಧಿಕಾರಿ ಬಿ ಎನ್ ಬಾಸೂರ,ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಹೇಮರಡ್ಡಿ ಸೋಮಣ್ಣವರ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ,ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
04/12/2020 07:12 pm