ನವಲಗುಂದ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನವಲಗುಂದ ಪಟ್ಟಣದ ನೀಲಮ್ಮ ಕೆರೆಯ ಎದುರು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತಾಲೂಕು ಸಮಿತಿ ವತಿಯಿಂದ ಧರಣಿ ಕೂತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಇನ್ನೂ ಪ್ರತಿಭಟನೆ ನಡೆಸಿದ ಅವರು, ನೂತನ ಶಿಕ್ಷಣ ನೀತಿಯಲ್ಲಿ ಬಿಸಿಯೂಟ ಯೋಜನೆಯನ್ನು ಬಲಿಷ್ಠಗೊಳಿಸಬೇಕು, ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಕೈ ಬಿಡಬೇಕು, ಖಾಸಗಿ ಸಂಸ್ಥೆಗಳಿಗೆ ಯಾವುದೇ ಜವಾಬ್ದಾರಿ ನೀಡಬಾರದು, ಪ್ರತಿ ತಿಂಗಳು 5 ನೇ ತಾರೀಕಿನ ಒಳಗಡೆ ವೇತನ ಪಾವತಿಸಬೇಕು ಎಂಬ ಇನ್ನೂ ಹಲವು ಬೇಡಿಕೆಗಳನ್ನು ಹೊತ್ತು ಪ್ರತಿಭಟಿಸಿದ ಅವರು, ನಂತರ ತಹಸೀಲ್ದಾರ್ ಕಚೇರಿ ವರೆಗೂ ಮೆರವಣಿಗೆ ಜಾತಾ ಮೂಲಕ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
Kshetra Samachara
26/11/2020 01:08 pm