ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಆಸ್ಪತ್ರೆ. ಕೋರೋನಾ ಸಂದರ್ಭದಲ್ಲಿ ಸಾಕಷ್ಟು ಹೋರಾಟ ನಡೆಸಿದ ಆಸ್ಪತ್ರೆಗೆ ಮತ್ತೊಂದು ಗೌರವದ ಗರಿ ಬಂದಿದೆ. ಅಷ್ಟಕ್ಕೂ ಆ ಆಸ್ಪತ್ರೆ ಯಾವುದು ಸಾಧನೆ ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ವಾಣಿಜ್ಯನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆ ಜಾರಿಯಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು,ಕಿಮ್ಸ್ ಆಸ್ಪತ್ರೆಯ ಗೌರವ ಮತ್ತಷ್ಟು ಇಮ್ಮಡಿಗೊಂಡಿದೆ.ಹೌದು..ಕೊರೋನಾ ಸಂದರ್ಭದಲ್ಲಿ ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆ,ಕೊರೋನಾ ಸೋಂಕಿತರಿಗೆ ಡಯಾಲಿಸಿಸ್ ಸೇರಿದಂತೆ ಸಾಕಷ್ಟು ಸಾಧನೆ ಮಾಡಿದ ಕಿಮ್ಸ್ ರಾಜ್ಯದಲ್ಲಿಯೇ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ.
2020 ಏಪ್ರಿಲ್ ತಿಂಗಳಿನಿಂದ ನ.12ರವರೆಗೆ ಎಬಿಎಆರ್‌ಕೆ ಯೋಜನೆಯಡಿ 5,741 ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ರಾಜ್ಯದಲ್ಲಿಯೇ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 4,522 ರೋಗಿಗಳಿಗೆ ಚಿಕಿತ್ಸೆ ನೀಡಿರುವ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆ ದ್ವಿತೀಯ ಸ್ಥಾನದಲ್ಲಿದೆ.ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳನ್ನು ಕೂಡ ಹಿಂದಿಟ್ಟು ಕಿಮ್ಸ್ ದಾಖಲೆ ನಿರ್ಮಾಣ ಮಾಡಿದೆ.
Kshetra Samachara
25/11/2020 05:11 pm