ಕುಂದಗೋಳ : ಪ್ರಾಥಮಿಕ ಆರೋಗ್ಯ ಕೇಂದ್ರ ಎಂದ್ರೇ ಅಲ್ಲಿನ ಅವ್ಯವಸ್ಥೆಗಳೇ ಜನರನ್ನು ಆಸ್ಪತ್ರೆಗೆ ಬಾರದಂತೆ ಮಾಡಿ ಬಿಡ್ತವೆ ಆದ್ರೆ ಇಲ್ಲೋಂದು ಆಸ್ಪತ್ರೆ ಮಾತ್ರ ಆ ಮಾತಿನಿಂದ ದೂರ ಉಳಿದಿದ್ದು ರೋಗಿಗಳಿಗೆ ಚಿಕಿತ್ಸೆ ನೀಡಿ ಉತ್ತಮ ಸ್ಪಂದನೆಗೆ ಹೆಸರು ಮಾಡಿದ್ರೂ ಕೆಲವು ಕೊರತೆಯಿಂದ ಬಳಲುತ್ತಿದೆ.
ಹೌದು ! ಕುಂದಗೋಳ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ವಚ್ಚತೆ ಸೈ ಎನಿಸಿದ್ದರು ಹಗಲೆಲ್ಲಾ ರಸ್ತೆ ಹಿಡಿದು ಸುತ್ತುವ ನಾಯಿಗಳು ಬೆಳಿಗ್ಗೆ ರಾತ್ರಿ ಆಸ್ಪತ್ರೆಯಲ್ಲಿ ಆಶ್ರಯ ಪಡೆದು ಸಾರ್ವಜನಿಕರಿಗೆ ಭಯ ತಂದೊಡ್ಡಿದ್ದು ಅನೈರ್ಮಲ್ಯ ಉಂಟು ಮಾಡ್ತಿವೆ.
ಮುಖ್ಯವಾಗಿ ಸುತ್ತಲಿನ ಹಳ್ಳಿಗಳಿಗೆ ವರವಾದ ಈ ಆಸ್ಪತ್ರೆಯಲ್ಲಿ ಮೊದಲಿದ್ದ ಆಂಬುಲೆನ್ಸ್ ಸೇವೆ ಸ್ಥಗಿತವಾಗಿದೆ ಆದ್ರೆ ಕೋವಿಡ್ ಕಾರಣ ಇಲ್ಲಿನ ಆಂಬುಲೆನ್ಸ್ ಸೇವೆಯನ್ನ ಸ್ಥಗಿತಗೊಳಿಸಿಲ್ಲ ಇತ್ತಿಚಿಗೆ ಈ ಆಸ್ಪತ್ರೆಗೆ ಆಂಬುಲೆನ್ಸ್ ಸೇವೆಯನ್ನೆ ನೀಡಿಲ್ಲ ಹೆರಿಗೆ ಮತ್ತು ಪ್ರಸೂತಿ ಕೇಂದ್ರ ಹೊಂದಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಬೇಕಾದಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆ ಮಾಡಿ ಬರೋವರ್ಗೂ ಕಾಯ್ಬೇಕು ಈ ಸ್ಥಿತಿ ಸುತ್ತಲಿನ ರೋಗಿಗಳು ಹಾಗೂ ಗರ್ಭಿಣಿಯರ ಬಾಣಂತಿಯರ ಪಾಲಿಗೆ ಮುಳುವಾಗಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಬೇಕಾಗಿದೆ.
Kshetra Samachara
02/11/2020 11:25 am