ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಣಿಗೆ ಕಾಣದ ವೈರಿಯ ವಿರುದ್ಧ ಸಮರ ಸಾರಿದ ಧಾರವಾಡ ಜಿಲ್ಲೆಯ ಕಲಿಗಳು

ಕೋರೊನಾ ವೈರಸ್ ನಿಯಂತ್ರಣಕ್ಕೆ ಕಂಕಣಬದ್ದ ಕೈಗಳಿಗೆ ನಮ್ಮದೊಂದು ನಮನ

ಹುಬ್ಬಳ್ಳಿ: ಕಣ್ಣಿಗೆ ಕಾಣುವ ಸಮಸ್ಯೆ ವಿರುದ್ಧದ ಹೋರಾಟವೇ ಕಷ್ಟ. ಅಂತಹದರಲ್ಲಿ ಕಣ್ಣಿಗೆ ಕಾಣದಿರುವ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿದೆ.

ಆದರೇ ಇಂತಹ ವೈರಸ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶತಾಯು ಗತಾಯು ಹೋರಾಟಕ್ಕೆ ಸನ್ನದವಾಗಿದೆ.ಇಂತಹ ಕಣ್ಣಿಗೆ ಕಾಣದ ವೈರಿಯ ನಿರ್ನಾಮ ಮಾಡಲು ಧಾರವಾಡ ಜಿಲ್ಲೆಯು ಕೂಡ ಸತತ ಪರಿಶ್ರಮ ನಡೆಸಿದೆ.

ಧಾರವಾಡ ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಯಂತ್ರಣದ ಕಾರ್ಯ ನಿಜಕ್ಕೂ ಕಷ್ಟದ ಕೆಲಸವೇ ಸರಿ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ ಹಾಗೂ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಉತ್ತಮ ಆಡಳಿತದ ಮಾರ್ಗದಿಂದ ಸೂಕ್ತ ವ್ಯವಸ್ಥೆ ಹಾಗೂ ವ್ಯವಸ್ಥಿತ ನಿರ್ದೇಶನದ ಮೂಲಕ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿರುವುದು ಧಾರವಾಡ ಜಿಲ್ಲೆಯನ್ನು ಕೊರೋನಾದಿಂದ ಕಾಪಾಡುವಲ್ಲಿ ಸತತ ಪರಿಶ್ರಮ ನಡೆಸುತ್ತಿದ್ದಾರೆ.

ತೊಟ್ಟಿಲನ್ನು ತೂಗುವ ಕೈ ಏನೆಲ್ಲಾ ಮಾಡಬಹುದು ಎಂಬುವಂತ ಮಾತಿಗೆ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವರ್ತೀಕಾ ಕಟಿಯಾರ್ ಅವರೇ ಸೂಕ್ತ ನಿದರ್ಶನ.ವರ್ಗಾವಣೆಗೊಂಡಿದ್ದರೂ ಕೂಡ ಧಾರವಾಡ ಜಿಲ್ಲೆಯ ಜನರು ಮಾತ್ರ ನೆನಪಿಸುವಂತೆ ಮಾಡಿದ್ದಾರೆ.

ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇವಸ್ಥಾನ, ಮಂದಿರ,ಮಸೀದಿ,ಚರ್ಚ್ ಬಾಗಿಲು ಹಾಕಿದ್ದರೂ ಕೂಡ ದೇವರ ಸ್ವರೂಪವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಕಿಮ್ಸ್ ಕಾರ್ಯ ವಿಶೇಷವಾಗಿದೆ.

ಕಿಮ್ಸ್ ನಿರ್ದೇಶಕರಾದ ಡಾ.ರಾಮಲಿಂಗಪ್ಪ ಅಂಟರತಾನಿ ಅವರ ನಿರ್ದೇಶನ ಮೇರೆಗೆ ಕಾರ್ಯನಿರ್ವಹಿಸಿದ ವೈದ್ಯರ ತಂಡ ಜೀವನದ ಹಂಗು ತೊರೆದು ಕಾರ್ಯನಿರ್ವಹಿಸಿರುವುದು ಸೊಂಕೀತರನ್ನು ಗುಣಮುಖರಾಗಿ ಮಾಡಿ ಪುನರುಜ್ಜೀವನ ನೀಡಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಹು-ಧಾ ಮಹಾನಗರ ಪಾಲಿಕೆ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು,ಮಹಾನಗರ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ ಅವರು ಯಾರೇ ಸಾರ್ವಜನಿಕರು ‌ದೂರವಾಣಿ ಮೂಲಕ ಸಮಸ್ಯೆಗಳನ್ನು ಹೇಳಿಕೊಂಡರು ತಕ್ಷಣವೇ ಸ್ಪಂದಿಸಿ ಲಾಕ್ ಡೌನ್ ಸಂದರ್ಭದಲ್ಲಿ ಕೋರೊನಾ ವೈರಸ್ ಭೀತಿಯಲ್ಲಿರುವ ಜನರ ಸಹಾಯಕ್ಕೆ ನಿಂತಿರುವುದು ವಿಶೇಷವಾಗಿದೆ.

ಒಟ್ಟಿನಲ್ಲಿ ಒಂದು ಮನೆ ನಿರ್ಮಾಣಕ್ಕೆ ಹತ್ತು ಕೈಗಳ ಶ್ರಮ ಅಗತ್ಯ ಎಂಬುವಂತೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಧಾರವಾಡ ಜಿಲ್ಲೆಯಲ್ಲಿ ನೂರಾರು ಕೈಗಳು ಶ್ರಮಿಸುತ್ತಿವೆ ಅಂತಹ ಸಹೃದಯಿ ಹೋರಾಟಗಾರರಿಗೆ ನಮ್ಮದೊಂದು ಸಲಾಂ...!

Edited By : Nirmala Aralikatti
Kshetra Samachara

Kshetra Samachara

01/11/2020 02:25 pm

Cinque Terre

50.56 K

Cinque Terre

9

ಸಂಬಂಧಿತ ಸುದ್ದಿ