ಧಾರವಾಡ : ಶಹರ ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಅವರು ಇಂದು ಬೆಳಿಗ್ಗೆ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಯೊಂದಿಗೆ ಧಾರವಾಡ ನಗರದ ಮಾರುಕಟ್ಟೆ, ಬಸ್‍ನಿಲ್ದಾಣ, ಹೊಟೇಲ್ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು.
ಮಾರುಕಟ್ಟೆ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ವ್ಯಾಪಾರ ನಿರತ ಮಹಿಳೆಯರಿಗೆ, ಖರೀದಿದಾರರಿಗೆ ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ತರಕಾರಿ ಸಂತೆಗಾಗಿ ಆಗಮಿಸಿದ್ದ ಜನರಿಗೆ ಎಸಿಪಿ ಅನುಷಾ ಅವರು ಸ್ವತ: ಮಾಸ್ಕ್ ಗಳನ್ನು ತೊಡಿಸಿ, ಅತ್ಮೀಯತೆಯಿಂದ ಮಾತನಾಡಿಸಿ ಕೊರೊನಾ ವೈರಸ್ ಕುರಿತು ಮುಂಜಾಗೃತೆ ವಹಿಸುವಂತೆ ಮತ್ತು ಸಾಮಾಜಿಕ ಅಂತರ ಪಾಲಿಸುವಂತೆ ತಿಳಿ ಹೇಳಿದರು.
ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ವಾಹನ ಸಂಚಾರರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್‍ಗಳನ್ನು ನೀಡಿ, ಮಾಸ್ಕ್ ಧರಿಸಿಯೆ ಸಂಚರಿಸುವಂತೆ ಮತ್ತು ವ್ಯಾಪಾರ ಮಾಡುವಂತೆ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧಾರಣೆ ಮತ್ತು ಸಾಮಾಜಿ ಅಂತರ ಪಾಲನೆ ಕುರಿತು ದಂಡದ ಬದಲಾಗಿ ಉಚಿತ ಮಾಸ್ಕ್ ನೀಡುವ ಮೂಲಕ ಜನಜಾಗೃತಿ ಮೂಡಿಸಲು ಸ್ವತ: ಎಸಿಪಿ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಗೆ ಇಳಿದಿರುವುದು ಸಾರ್ವಜನಕರ ಗಮನ ಸೆಳೆಯಿತು.
Kshetra Samachara
17/10/2020 08:33 pm