ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕೋವಿಡ್-19 ಜನಜಾಗೃತಿ ಅಭಿಯಾನಕ್ಕೆ ಜಿಲಾ ಪ್ರಧಾನ ನ್ಯಾಯಾಧೀಶ ಉಮೇಶ ಅಡಿಗ ಚಾಲನೆ

ಧಾರವಾಡ : ಕೊರೊನಾ ವೈರಸ್ ಸಾಮಾಜಿಕವಾಗಿ ಹರಡದಂತೆ ತಡೆಗಟ್ಟಲು ಎಲ್ಲ ನ್ಯಾಯಾಲಯಗಳು ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಕೋವಿಡ್-19 ಕುರಿತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಹಮ್ಮಿಕೊಂಡಿರುವ ಜನಜಾಗೃತಿ ಅಭಿಯಾನಕ್ಕೆ ಧಾರವಾಡ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಇಂದು ಬೆಳಿಗ್ಗೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಚಾಲನೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕೊರೊನಾ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ಬಿತ್ತರಿಸುವ ಸಂಚಾರಿ ವಾಹನಕ್ಕೆ ಹಸಿರು ಬಾವುಟ ತೋರಿ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಚಾಲನೆ ನೀಡಿ, ಉಪಸ್ಥಿತರಿದ್ದ ನ್ಯಾಯಾಧೀಶರಿಗೆ, ನ್ಯಾಯಾಲಯ ಸಿಬ್ಬಂದಿಗೆ, ಆಶಾ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಕೊರೊನಾ ನಿಯಂತ್ರಣಕ್ಕಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಜಾಗೃತಿ ಅಭಿಯಾನವು ಜಿಲ್ಲಾ ನ್ಯಾಯಾಲಯದಿಂದ ಆಲೂರು ವೆಂಕಟರಾವ್ ವೃತ್ತದವರೆಗೆ ಸಂಚರಿಸಿತು. ಅಭಿಯನ ಜಾಥಾದಲ್ಲಿ ನಡೆಸಿ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ಸಾರ್ವಜನಿಕವಾಗಿಯೇ ಉಚಿತವಾಗಿ ಸ್ವತ: ಮಾಸ್ಕ್ ತೊಡಿಸುವ ಮೂಲಕ ಅರಿವು ಮೂಡಿಸಿದರು.

Edited By : Manjunath H D
Kshetra Samachara

Kshetra Samachara

17/10/2020 08:07 pm

Cinque Terre

13.86 K

Cinque Terre

2

ಸಂಬಂಧಿತ ಸುದ್ದಿ