ಧಾರವಾಡ: ಜಿಲ್ಲೆಯಾದ್ಯಂತ ಇಂದು ಮತ್ತೆ 4773 ಜನ ಶಂಕಿತ ಸೋಂಕಿತರಿಂದ ರಕ್ತ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಿ ತಪಾಸಣೆಗಾಗಿ ನೀಡಲಾಗಿದೆ. ಆ ಮೂಲಕ ಇದುವರೆಗೆ ಮಾದರಿ ಸಂಗ್ರಹಿಸಿದವರ ಸಂಖ್ಯೆ 101687 ಕ್ಕೆ ಏರಿಕೆಯಾಗಿದೆ.
ನಿನ್ನೆ ಕಳುಹಿಸಿದ ಮಾದರಿ ಪೈಕಿ 281 ಜನರ ವರದಿ ನೆಗೆಟಿವ್ ಬಂದಿದೆ. 135 ಜನರ ವರದಿ ಪಾಸಿಟಿವ್ ಎಂದು ಬಂದಿದೆ. ಇದರೊಟ್ಟಿಗೆ ಜಿಲ್ಲೆಯಾದ್ಯಂತ ಇನ್ನೂ 301ಜನರ ವರದಿ ಬರುವುದು ಬಾಕಿ ಉಳಿದಿದೆ.
ಇದುವರೆಗೆ 101687 ಜನರನ್ನು ತಪಾಸಣೆಗೊಳಪಡಿಸಲಾಗಿದ್ದು, ಅದರಲ್ಲಿ 98816 ಜನರ ವರದಿ ನೆಗೆಟಿವ್ ಎಂದು ಬಂದಿದೆ.
15189 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 12619 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 446 ಜನ ಸೋಂಕಿನಿಂದ ಮೃತಪಟ್ಟಿದ್ದರೆ, ಬಾಕಿ ಇರುವ 2124 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಜಿಲ್ಲೆಯಾದ್ಯಂತ ಒಟ್ಟು 103152 ಜನರ ಮೇಲೆ ನಿಗಾ ಇಡಲಾಗಿದ್ದು, 10891 ಜನರನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
20529 ಜನ ಈಗಾಗಲೇ 14 ದಿನಗಳ ಹೋಮ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 69608 ಜನ 28 ದಿನಗಳ ಕಾಲ ಹೋಮ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
Kshetra Samachara
18/09/2020 09:13 pm