ಕಲಘಟಗಿ:ತಾಲೂಕಿನ ಗಂಭ್ಯಾಪೂರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡನೇ ವಾರ್ಡ್ ನಿಂದ ಅತ್ಯಧಿಕ ಮತಗಳ ಅಂತರದಿಂದ ನನ್ನನ್ನು ಸದಸ್ಯನನ್ನಾಗಿ ಆಯ್ಕೆ ಮಾಡಿದ ಗ್ರಾಮದ ಗುರು ಹಿರಿಯರು, ಯುವಕರು, ತಾಯಂದಿರು, ಸಹೋದರಿಯರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.
ನನ್ನ ಗೆಲುವಿಗೆ ಸದಾ ಬೆನ್ನೆಲುಬಾಗಿ ನಿಂತ ಸಮಸ್ತ ಜನತೆಗೆ ನಾನು ಸದಾ ಚಿರಋಣಿ
ಗ್ರಾಮ ಪಂಚಾಯಿತಿಗೆ ಮೊದಲ ಬಾರಿಗೆ ನನ್ನನ್ನು ಆಯ್ಕೆ ಮಾಡಿ ಗ್ರಾಮದ ಹಾಗೂ ಎರಡನೇ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟ ಮತದಾರ ಬಾಂಧವರಿಗೆ ಅನಂತ ಕೋಟಿ ಧನ್ಯವಾದಗಳು.ನನ್ನ ಮೇಲೆ ತಾವುಗಳು ಇಟ್ಟ ನಂಬಿಕೆಯನ್ನು ಸದಾ ಉಳಿಸಿಕೊಳ್ಳುತ್ತೇನೆ. ವಾರ್ಡಿನ ಹಾಗೂ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ
ಸರ್ವರಿಗೂ ಹೊಸ ವರ್ಷದ ಹಾಗೂ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು
ಮತದಾರ ಬಾಂಧವರಿಗೆ ಧನ್ಯವಾದ ಸಲ್ಲಿಸುವವರು...
ಶ್ರೀ ರುದ್ರಯ್ಯ ಸಂಗಯ್ಯ ಚಿಕ್ಕಮಠ
ಸದಸ್ಯರು, ಗಂಭ್ಯಾಪೂರ-ಗ್ರಾಮ ಪಂಚಾಯಿತಿ, ತಾಲೂಕು ಕಲಘಟಗಿ
Kshetra Samachara
13/01/2021 10:27 am