ನವಲಗುಂದ: ಗಣೇಶ ಚತುರ್ಥಿ ಪ್ರಯುಕ್ತ ಈಗಾಗಲೇ ಗಣಪನ ವಿಗ್ರಹ ತಯಾರಿಕೆ ಹಾಗೂ ಮಾರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರವು ಸಹ ಪರಿಸರ ಸ್ನೇಹಿ ಗಣಪನ ಬಳಕೆಗೆ ಈಗಾಗಲೇ ಸೂಚನೆ ನೀಡಿದೆ. ಇದನ್ನು ಕಟ್ಟು ನಿಟ್ಟಾಗಿ ಪಾಲಿಸಲು ಬುಧವಾರ ನವಲಗುಂದ ಪುರಸಭೆ ಸಹ ಎಚ್ಚರಿಕೆಯ ಹಾಗೂ ಜಾಗೃತಿಯ ಪ್ರಕಟಣೆಯನ್ನು ಹೊರಡಿಸಿದೆ.
ಹೌದು. ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರ ಸೂಚನೆ ಮೇರೆಗೆ ಪ್ರಕಟಿಸಲಾದ ಪ್ರಕಟಣೆಯಲ್ಲಿ ಈ ವಿಷಯಗಳು ಒಳಗೊಂಡಿದ್ದವು. ಮಣ್ಣಿನ ಮೂರ್ತಿ ತಯಾರಿಸತಕ್ಕದ್ದು, ಯಾವುದೇ ಕಾರಣಕ್ಕೂ ಪಿ ಓ ಪಿ ಗಣಪತಿ ತಯಾರಿಸುವಂತಿಲ್ಲ. ಹಾಗೂ ಮಾರಾಟ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಕೂರಿಸುವವರು ತಹಶೀಲ್ದಾರ್, ಪೊಲೀಸ್ ಇಲಾಖೆ ಹಾಗೂ ಪುರಸಭೆಯಿಂದ ಖಡ್ಡಾಯವಾಗಿ ಪರವಾನಿಗೆ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್, ಫ್ಲೆಕ್ಸ್, ಬ್ಯಾನರ್ ಬಳಸುವಂತಿಲ್ಲ. ಹಾಗೂ ಹಸಿರು ಪಟಾಕಿ ಬಳಸಬೇಕು ಎಂದು ಪಟ್ಟಣದಲ್ಲಿ ಪ್ರಕಟಿಸಲಾಯಿತು.
Kshetra Samachara
25/08/2022 08:29 am