ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಂದುವರಿದ ಎಡವಟ್ಟು; 75ರ ಬದಲಿಗೆ 76 ಸ್ವಾತಂತ್ರ್ಯ ದಿನ ಮುದ್ರಿಸಿದ ಜಿಲ್ಲಾಡಳಿತ

ಹುಬ್ಬಳ್ಳಿ: ಒಂದಿಲ್ಲೊಂದು ಎಡವಟ್ಟುಗಳಿಂದ ಸುದ್ದಿಯಾಗುತ್ತಿರುವ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಹೌದು. ದೇಶದಾದ್ಯಂತ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ಸಂಭ್ರಮ‌ ಕಳೆ ಕಟ್ಟಿದೆ. ಇದರ ನಡುವೆ ಧಾರವಾಡ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ 75ರ ಬದಲಿಗೆ 76ನೇ ಸ್ವಾತಂತ್ರ್ಯ ದಿನಾಚರಣೆ ಎಂದು ಆಮಂತ್ರಣ ಪತ್ರಿಕೆ ಮುದ್ರಿಸುವ ಮೂಲಕ ಎಡವಟ್ಟು ಪ್ರದರ್ಶನ ಮಾಡಿದೆ. ಇನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕಚೇರಿಯ ಆಮಂತ್ರಣ ಪತ್ರಿಕೆಯಲ್ಲಿ ಒಂದೇ ರೀತಿಯ ಲೋಪ ಕಂಡು ಬಂದಿದೆ. 75ರ ಬಂದಲಿಗೆ 76 ಎಂದು ಮುದ್ರಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನೂ ಮಹಾನಗರ ಪಾಲಿಕೆ ಹರಿದ ಹಾಗೂ ಮಾಸಿದ ಧ್ವಜ ವಿತರಣೆ ನಡುವೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಯಡವಟ್ಟು ನಗೆಪಾಟಿಲಿಗೆ ಇಡಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, 75ನೇ ವರ್ಷ ಮುಗಿದು 76ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ 76 ಎಂದು ಮುದ್ರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

Edited By : Vijay Kumar
Kshetra Samachara

Kshetra Samachara

12/08/2022 06:53 pm

Cinque Terre

8.81 K

Cinque Terre

10

ಸಂಬಂಧಿತ ಸುದ್ದಿ