ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ನೂತನ ಡಿ.ಸಿ ಗುರುದತ್ತ ಹೆಗ್ಡೆ ಕನ್ನಡದ ಹೆಮ್ಮೆ

ಕನ್ನಡದಲ್ಲಿಯೆ ಪರೀಕ್ಷೆ ಬರೆದು 25 ನೇ Rank ದೊಂದಿಗೆ ಐಎಎಸ್ ಪಾಸಾಗಿದ್ದ ಕನ್ನಡದ ಕುವರ, ಗುರುದತ್ತ ಹೆಗ್ಡೆ ಇಂದು ನಮ್ಮ ಧಾರವಾಡ ಜಿಲ್ಲೆ ನೂತನ ಜಿಲ್ಲಾಧಿಕಾರಿ.

ಕನ್ನಡವೆಂದರೆ ಮೂಗು ಮುರಿಯುವ ಕೆಲವು ಐಎಎಸ್ ಅಧಿಕಾರಿಗಳ ನಡುವೆ ನಮ್ಮ ಕನ್ನಡದ ಐಎಎಸ್ ಅಧಿಕಾರಿ ಬಂದಿದ್ದಾರೆ ಎಂದು ಹೆಮ್ಮೆ ಪಡೋಣ.

ಈವರೆಗೆ ಇಲ್ಲಿ ಸೇವೆ ಸಲ್ಲಿಸಿ ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಹೊಂದಿರುವ ನಿತೇಶ್ ಪಾಟೀಲ್ ಅವರ ಸ್ಥಾನಕ್ಕೆ ಗುರುದತ್ತ ಹೆಗ್ಡೆ ಬಂದಿದ್ದಾರೆ.

ಇಂಜನೀಯರಿಂಗ್ ಪದವೀಧರ ಗುರುದತ್ತ ಹೆಗ್ಡೆ ಮೂರನೆ ಪ್ರಯತ್ನದಲ್ಲಿ 2014 ರಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿದ್ದಾರೆ.

ದಕ್ಷ ಆಡಳಿತ ನೀಡಬೇಕು ಎಂಬುದು ನನ್ನ ಗುರಿ, ಧಾರವಾಡದಲ್ಲಿ ಕೆಲವು ಐಎಎಸ್ ಅಧಿಕಾರಿಗಳು ಮಾಡಿದ ಉತ್ತಮ ಕಾರ್ಯಗಳು ನನ್ನನ್ನು ಆಡಳಿತ ಸೇವೆಯತ್ತ ಸೆಳೆಯಿತು ಎಂದು ಆಗಾಗ ಹೇಳುತ್ತಿದ್ದರು. ಅವರ ಗುರಿ ಹಾಗೂ ಸೆಳೆತ ಇಂದು ಅವರನ್ನು ಧಾರವಾಡಕ್ಕೆ ಕರೆ ತಂದಿದೆ.

ಎನ್ ಜಿಒವೊಂದರಲ್ಲಿ ಕಾರ್ಯ ನಿರ್ವಹಿಸಿರುವ ಹೆಗ್ಡೆ ಅವರಿಗೆ ಗ್ರಾಮೀಣ ಆಡಳಿತ, ಇ-ಆಡಳಿತ ಹಾಗೂ ಮಹಿಳಾ ಸಬಲೀಕರಣ ಹಾಗೂ ಮಾಹಿತಿ ತಂತ್ರಜ್ಞಾನ ತಮ್ಮ ಆಸಕ್ತಿದಾಯಕ ಕ್ಷೇತ್ರಗಳು ಎನ್ನುತ್ತಾರೆ.

ಮೂಲತಃ ಉತ್ತರಕನ್ನಡ ಜಿಲ್ಲೆ ಶಿರ್ಸಿವರಾದರೂ ಧಾರವಾಡದವರೆ ಎಂದು ಗುರುತಿಸಿಕೊಂಡಿದ್ದರು. ಇವರ ತಂದೆ ಓರ್ವ ಗುತ್ತಿಗೆದಾರರು ಹಾಗೂ ತಾಯಿ ಓರ್ವ ಶಿಕ್ಷಕಿ.

ಧಾರವಾಡ ಜಿಲ್ಲೆಯಲ್ಲಿ ಸಮಸ್ಯೆ, ಸವಾಲುಗಳು ಹಲವಾರು, ಅವುಗಳನ್ನು ಸಮರ್ಥವಾಗಿ ಎದುರಿಸಿ ಉತ್ತಮ ಆಡಳಿತ ನೀಡಲಿ ಎಂಬುದೇ ಜಿಲ್ಲೆ ಜನರ ಆಶಯ.

Edited By :
Kshetra Samachara

Kshetra Samachara

05/05/2022 06:44 pm

Cinque Terre

11.66 K

Cinque Terre

12

ಸಂಬಂಧಿತ ಸುದ್ದಿ