ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಧಾರವಾಡದಲ್ಲಿ ಬಸ್ ಸಮಸ್ಯೆ; ಸದನದಲ್ಲಿ ಧ್ವನಿ ಎತ್ತಿದ ಶಾಸಕ ಅಮೃತ ದೇಸಾಯಿ

ಧಾರವಾಡ ಗ್ರಾಮಾಂತರ ಪ್ರದೇಶ ಹಾಗೂ ಕಲಘಟಗಿ ಭಾಗದಲ್ಲಿರುವ ಸಾರಿಗೆ ಸಮಸ್ಯೆ ಕುರಿತು ಶಾಸಕ ಅಮೃತ ದೇಸಾಯಿ ಸದನದಲ್ಲಿ ಧ್ವನಿ ಎತ್ತಿದರು.

ಧಾರವಾಡ ಗ್ರಾಮಾಂತರ ಭಾಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ವ್ಯವಸ್ಥೆ ಮಾಡಬೇಕು. ಇದು ಗ್ರಾಮೀಣ ಪ್ರದೇಶಗಳ ಸಮಸ್ಯೆ ಮಾತ್ರವಲ್ಲ, ಕಲಘಟಗಿ ಭಾಗದಲ್ಲೂ ಬಸ್ಸಿನ ಸಮಸ್ಯೆ ಇದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಸಚಿವರಿಗೆ ಮನವಿ ಮಾಡಿದರು.

ಈ ಸಮಸ್ಯೆ ಪ್ರಸ್ತಾಪದ ಬಗ್ಗೆ ಉತ್ತರಿಸಿದ ಸಾರಿಗೆ ಸಚಿವ ಶ್ರೀರಾಮುಲು, ಧಾರವಾಡ ಭಾಗದಲ್ಲಿ ಬಸ್ಸಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಜೊತೆಗೆ ಸಿಬ್ಬಂದಿ ಕೊರತೆಯನ್ನೂ ನೀಗಿಸಲಾಗುವುದು ಎಂದರು.

Edited By :
Kshetra Samachara

Kshetra Samachara

24/03/2022 01:32 pm

Cinque Terre

17.7 K

Cinque Terre

1

ಸಂಬಂಧಿತ ಸುದ್ದಿ