ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಶನಿವಾರ ಸಾಸ್ವಿಹಳ್ಳಿ ಗ್ರಾಮದಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ

ಅಣ್ಣಿಗೇರಿ; ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರತಿ ತಿಂಗಳ 3ನೇ ಶನಿವಾರದಂದು ತಹಶೀಲ್ದಾರ್ ಹಾಗೂ ತಾಲೂಕು ಆಡಳಿತ ವರ್ಗ ತಾಲೂಕಿನ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಬೇಕೆಂಬ ಆದೇಶ ಜಾರಿ ಹಿನ್ನಲೆ, ಶನಿವಾರದಂದು ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ವರ್ಗ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಗ್ರಾಮದ ಸಾರ್ವಜನಿಕ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸಿ, ವರದಿ ಸಲ್ಲಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಈಗಾಗಲೇ ಸಾರ್ವಜನಿಕರು ಕಾಟಾಚಾರಕ್ಕೆ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ ಹೋಗುತ್ತಿದ್ದಾರೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾರೆ. ಕೆಲ ಇಲಾಖೆ ಅಧಿಕಾರಿಗಳು ಗ್ರಾಮ ವಾಸ್ತವಕ್ಕೆ ಹಾಜರಾತಿ ಇರುವುದಿಲ್ಲ. ಸಾರ್ವಜನಿಕರಿಗೆ ಆ ಇಲಾಖೆಗೆ ಸಂಬಂಧಪಟ್ಟಂತೆ ಅಧಿಕಾರಿಗಳನ್ನು ಕೇಳಬೇಕೆಂದರೆ ಆ ಅಧಿಕಾರಿಗಳು ಅಲ್ಲಿ ಇರುವುದಿಲ್ಲ.

ಕೆಲ ಅಧಿಕಾರಿಗಳಂತೂ 10:00 ಗಂಟೆ ಗೆ ಹಾಜರಾಗುವಂತೆ ಹೇಳಿದರೆ ಅವರು ವೇಳೆಗೆ ಸರಿಯಾಗಿ ಬರುವುದಿಲ್ಲ. ಇನ್ನೂ ಕೆಲ ಅಧಿಕಾರಿಗಳಂತೂ ವೇಳೆ ಮುಗಿದಿರುವುದಿಲ್ಲ ಅಲ್ಲಿಂದ ಕಾಲು ಕೀಳುತ್ತಾರೆ ಎಂದು ಈ ಹಿಂದೆ ಆದ ಗ್ರಾಮ ವಾಸ್ತವ್ಯ ಹಳ್ಳಿಯ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ನಾಳೆ ನಡೆಯಲಿರುವ ಗ್ರಾಮ ವಾಸ್ತವ್ಯದಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತದೆ. ಮತ್ತು ತಾಲೂಕಿನ ತಹಶೀಲ್ದಾರ್ ಮಂಜುನಾಥ ಅಮಾಸೆ ಅವರು ಯಾವ ರೀತಿ ಕ್ರಮಗಳನ್ನು ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

Edited By : Nirmala Aralikatti
Kshetra Samachara

Kshetra Samachara

18/02/2022 03:25 pm

Cinque Terre

8.79 K

Cinque Terre

0

ಸಂಬಂಧಿತ ಸುದ್ದಿ