ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜೈಲು ಹಕ್ಕಿಗಳು ರೇಡಿಯೋ ಜಾಕಿಗಳಾಗುವ ಕಾಲವೂ ಬಂತು

ಧಾರವಾಡ: ಹಾಯ್ ಹಲೋ ನಮಸ್ಕಾರ.. ನಾನು ನಿಮ್ಮ ಆರ್‌ಜೆ ಮಾತನಾಡ್ತಿರೋದು ಎಂಬ ಡೈಲಾಗ್‌ನ್ನು ನಾವು ಎಫ್‌ಎಂ ರೇಡಿಯೋ ಮೂಲಕ ಎಲ್ಲಿ ಬೇಕಾದರೂ ಕೇಳುತ್ತಲೇ ಇರುತ್ತೇವೆ. ಈಗ ಅದೇ ರೀತಿ ಜೈಲುವಾಸ ಅನುಭವಿಸುತ್ತಿರುವ ಕೈದಿಗಳು ಕೂಡ ಮಾತನಾಡಲು ಹಾಗೂ ರೇಡಿಯೋ ಜಾಕಿಗಳಾಗುವ ಕಾಲ ಕೂಡಿ ಬಂದಿದೆ.

ಹೌದು! ಇದೇನಪ್ಪ ಸ್ಟೋರಿ ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.

ಇದು ಧಾರವಾಡದ ಕೇಂದ್ರ ಕಾರಾಗೃಹ. ಸುಮಾರು 18 ಎಕರೆ ವಿಸ್ತಾರವನ್ನು ಈ ಕಾರಾಗೃಹ ಹೊಂದಿದೆ. ಕೈದಿಗಳ ಮನಃಪರಿವರ್ತನೆ ಸಲುವಾಗಿ ಸದಾ ಒಂದಿಲ್ಲೊಂದು ಚಟುವಟಿಕೆಗಳು ಈ ಕಾರಾಗೃಹದಲ್ಲಿ ನಡೆಯುತ್ತಲೇ ಇರುತ್ತವೆ. ಇದೀಗ 18 ಎಕರೆ ಪ್ರದೇಶದಲ್ಲಷ್ಟೇ ಪ್ರಸಾರವಾಗಬಹುದಾದ ಹೊಸ ರೇಡಿಯೋ ಕೇಂದ್ರವನ್ನು ಹುಟ್ಟು ಹಾಕಲಾಗಿದೆ.

ಒಟ್ಟು 4 ಲಕ್ಷ 60 ಸಾವಿರ ರೂಪಾಯಿ ವೆಚ್ಚದಲ್ಲಿ ಎಫ್ಎಂ ರೇಡಿಯೋ ಕೇಂದ್ರ ಆರಂಭಗೊಂಡಿದ್ದು, ಇದು ಒಟ್ಟು 18 ಎಕರೆ ವಿಸ್ತಾರವುಳ್ಳ ಜೈಲಿನೊಳಗೆ ಮಾತ್ರ ಪ್ರಸಾರದ ವ್ಯಾಪ್ತಿ ಹೊಂದಿದೆ. ಕೈದಿಗಳನ್ನು ಸದಾ ಚೈತನ್ಯದಿಂದ ಇಡುವುದೇ ಜೈಲು ಸಿಬ್ಬಂದಿಗೆ ದೊಡ್ಡ ಸವಾಲು. ಇದೇ ಕಾರಣಕ್ಕೆ ಈಗ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಹೊಸದಾಗಿ ಎಫ್ಎಂ ರೇಡಿಯೋ ಕೇಂದ್ರ ಆರಂಭಿಸಲಾಗಿದ್ದು, ಬಂಧಿಯಾಗಿರುವವರ ಜೊತೆಗೆ ನಾಲ್ಕು ಜನ ಜೈಲು ಸಿಬ್ಬಂದಿ ಈ ರೇಡಿಯೋ ಕೇಂದ್ರ ನೋಡಿಕೊಳ್ಳುತ್ತಾರೆ.

ಈ ಎಫ್​​ಎಂ‌ ರೇಡಿಯೋ ಕೇಂದ್ರದಿಂದ ಕಾರ್ಯಕ್ರಮಗಳು ಬೆಳಿಗ್ಗೆ 7-30 ರಿಂದ 8-30 ಹಾಗೂ ರಾತ್ರಿ 7-30 ರಿಂದ 8-30ರವರೆಗೆ ತನ್ನದೇ ವ್ಯಾಪ್ತಿ ಹೊಂದಿರುವ ಪ್ರದೇಶದಲ್ಲಿ ಪ್ರಸಾರವಾಗುತ್ತವೆ. ಇನ್ನೊಂದು ವಿಶೇಷತೆ ಎಂದರೆ ಜೈಲಿನಲ್ಲಿರುವವರು ಯಾರು ಬೇಕಾದರೂ ಹೋಗಿ ಅಲ್ಲಿ ಹಾಡು, ಕಥೆ ಹೀಗೆ ಮುಂತಾದವುಗಳ ಕುರಿತು ಮಾತನಾಡಬಹುದಾಗಿದೆ. ಅಲ್ಲಿರುವ ಬಂಧಿಗಳ ಜನ್ಮ ದಿನವಿದ್ದರೆ ಹೋಗಿ ವಿಷ್ ಸಹ ಮಾಡಬಹುದಾಗಿದೆ. ಒಟ್ಟಿನಲ್ಲಿ ಸಜಾ ಬಂಧಿಗಳು ಇದೀಗ ರೇಡಿಯೋ ಜಾಕಿಗಳಾಗುವ ಕಾಲ ಕೂಡ ಸನ್ನಿಹಿತವಾಗಿದೆ. ಸುದ್ದಿ, ಮನರಂಜನೆ, ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಕಾರಾಗೃಹ ಅಧಿಕಾರಿಗಳ ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

-ಪ್ರವೀಣ ಓಂಕಾರಿ,

ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Manjunath H D
Kshetra Samachara

Kshetra Samachara

05/02/2022 02:34 pm

Cinque Terre

32.68 K

Cinque Terre

2

ಸಂಬಂಧಿತ ಸುದ್ದಿ