ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಜಂಟಿ ಆಯುಕ್ತರಾಗಿ ಪ್ರೋಬೆಷನರಿ ಐ.ಎ.ಎಸ್ ಅಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಪಾಲಿಕೆ ಜಂಟಿ ಆಯುಕ್ತ ಸ್ಥಾನಕ್ಕೆ ಗಿತ್ತೆ ಮಾಧವ ವಿಠ್ಠಲ ರಾವ್ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
2020ನೇ ಬ್ಯಾಚ್ನ ಐ.ಎ.ಎಸ್ ಪ್ರೋಬೆಷನರಿಯಾದ ಇವರು ಧಾರವಾಡ ಜಿಲ್ಲೆಯ ಕಂದಾಯ ವಿವಿಧ ವಿಷಯಗಳ ತರಬೇತಿಗಾಗಿ ನಿಯೋಜನೆಯಾಗಿದ್ದರು.
Kshetra Samachara
25/01/2022 06:56 pm