ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳದ ಅಭಿವೃದ್ಧಿಗೆ ಹಿನ್ನಡೆ ಪಟ್ಟಣ ಪಂಚಾಯ್ತಿಲಿ ಸಿಬ್ಬಂದಿ ಕೊರತೆ

ಕುಂದಗೋಳ : ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕಿದ್ದ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ಕೊರತೆಯಲ್ಲೇ ಕಾಲ ದೂಡುತ್ತಾ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದೆ.

ಕಳೆದ 2011ರ ಜನಗಣತಿ ಪ್ರಕಾರ 18.776 ಜನಸಂಖ್ಯೆ ಹೊಂದಿರುವ ಕುಂದಗೋಳ ಪಟ್ಟಣ ದಿನ ಕಳೆದಂತೆ ಸಾಮಾಜಿಕ ಮತ್ತು ಆರ್ಥಿಕವಾಗಿ ಬೆಳೆಯುತ್ತಲೇ ಇದೆ.

ಪ್ರಸಕ್ತ 19 ವಾರ್ಡ್ ಹಾಗೂ ಚುನಾಯಿತ 19 ಸದಸ್ಯರನ್ನು ಒಳಗೊಂಡಿರುವ ಪಟ್ಟಣ ಪಂಚಾಯಿತಿ ಪಟ್ಟಣದ ಅಭಿವೃದ್ಧಿಗೆ ರೂಪುರೇಷೆ ಹಾಕಬೇಕಾದ ಅಧಿಕಾರಿಗಳೇ ಇಲ್ಲದೆ ಜನ ಸಾಮಾನ್ಯರ ಕೆಲಸಗಳು ದಿನ ಕಳೆಯುತ್ತಿವೆ.

ಸಧ್ಯ ಪಟ್ಟಣ ಪಂಚಾಯಿತಿಯಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ವಾಟರ್ ಸಪ್ಲ್ಯಾ ಆಪರೇಟರ್, ಡಾಟಾ ಆಪರೇಟರ್, ವಾಹನ ಚಾಲಕ, ಅಸಿಸ್ಟೆಂಟ್ ವಾಟರ್ ಸಪ್ಲ್ಯಾ ಆಪರೇಟರ್, ಅಟೆಂಡರ್, ವಾಟರ್ ಸಪ್ಲ್ಯಾ ಹೆಲ್ಪರ್, ಜ್ಯೂನಿಯರ್ ಇಂಜಿನಿಯರ್, ತಲಾ ಒಂದೊಂದು ಹುದ್ದೆ ಖಾಲಿ ಇದ್ರೆ, ನಾಲ್ಕು ಲೋಡರ್ಸ್ ಹುದ್ದೆಗಳು, ಹದಿನೈದು ಪೌರ ಕಾರ್ಮಿಕರ ಹುದ್ದೆಗಳು ಸೇರಿ ಒಟ್ಟು 27 ಹುದ್ದೆಗಳು ಖಾಲಿ ಖಾಲಿ ಇವೆ.

ಪ್ರಸಕ್ತ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೆಲ ಪೌರ ಕಾರ್ಮಿಕರು ಇತರೆ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡಿ ಕರ್ತವ್ಯ ಮುಂದುವರೆಸಿದ್ದರೂ ಜನರ ಕೆಲಸ ಹಾಗೂ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಖಾಲಿ ಹುದ್ದೆ ಭರ್ತಿ ಮಾಡಬೇಕಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

23/11/2021 03:48 pm

Cinque Terre

21.32 K

Cinque Terre

0

ಸಂಬಂಧಿತ ಸುದ್ದಿ