ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಪ ಚುನಾವಣೆ: ನ.17 ರೊಳಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಧಾರವಾಡ: ಭಾರತ ಚುನಾವಣಾ ಆಯೋಗದ ಮತದಾರರ ನೋಂದಣಿ ನಿಯಮಗಳ ಅನುಸಾರವಾಗಿ ಕರ್ನಾಟಕ ವಿಧಾನಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ನವೆಂಬರ್ 11 ರಂದು ಪ್ರಕಟಿಸಲಾಗಿದೆ. ಕ್ಲೇಮುಗಳು ಅಥವಾ ಆಕ್ಷೇಪಣಿಗಳಿದ್ದರೆ ನವೆಂಬರ್ 17 ರೊಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾ ಮತದಾರರ ನೋಂದಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತದಾರರ ಪಟ್ಟಿಯನ್ನು ಮತದಾರರ ನೋಂದಣಿ ಕಾರ್ಯಾಲಯದಲ್ಲಿ ಹಾಗೂ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಕಾರ್ಯಾಲಯದಲ್ಲಿ ಪ್ರಕಟಿಸಲಾಗಿದೆ.

ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರವು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳನ್ನೊಳಗೊಂಡಿದ್ದು, ಧಾರವಾಡ ಜಿಲ್ಲೆಯಲ್ಲಿ 144, ಗದಗ ಜಿಲ್ಲೆಯಲ್ಲಿ 130 ಮತ್ತು ಹಾವೇರಿ ಜಿಲ್ಲೆಯಲ್ಲಿ 230 ಮತಗಟ್ಟೆಗಳು ಸೇರಿ ಒಟ್ಟು ಕ್ಷೇತ್ರದಲ್ಲಿ 504 ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ.

ಧಾರವಾಡ ಜಿಲ್ಲೆಯಲ್ಲಿ 2164 ( ಗಂಡು -1054 , ಹೆಣ್ಣು 1110 ) , ಗದಗ ಜಿಲ್ಲೆಯಲ್ಲಿ 1969 ( ಗಂಡು -969 , ಹೆಣ್ಣು -1000 ) ಮತ್ತು ಹಾವೇರಿ ಜಿಲ್ಲೆಯಲ್ಲಿ 3369 ( ಗಂಡು 1636 , ಹೆಣ್ಣು -1733 )

ಮತಕ್ಷೇತ್ರದಲ್ಲಿ ಒಟ್ಟು ಗಂಡು -3659 , ಹೆಣ್ಣು -3843 ಸೇರಿ ಒಟ್ಟು 7502 ಮತದಾರರು ಇರುತ್ತಾರೆ .

ಮತದಾರರ ಪಟ್ಟಿಗೆ ಆಕ್ಷೇಪಣೆಗಳಿದ್ದರೆ, ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಯಾವುದೇ ಕ್ಷೇಮು ಇದ್ದರೆ, ಯಾವುದಾದರೂ ಹೆಸರನ್ನು ಸೇರಿಸಿರುವುದಕ್ಕೆ ಸಂಬಧಿಸಿದಂತೆ ಅಥವಾ ಯಾವುದೇ ನಮೂದಿನಲ್ಲಿರುವ ವಿವರಗಳಿಗೆ ಯಾವುದೇ ಆಕ್ಷೇಪಣೆಗಳು ಇದ್ದರೆ, ಯುಕ್ತವಾದ ರೀತಿಯಲ್ಲಿ ನಮೂನೆ 17 , 7 ( Annexure - 9 ) ಅಥವಾ 8 ( Annexure - 10 ) ರಲ್ಲಿ ನವೆಂಬರ್ 17 ಅಥವಾ ಅದಕ್ಕಿಂತ ಮುಂಚಿತವಾಗಿ ಪ್ರತಿಯೊಂದು ಕ್ಷೇಮು ಅಥವಾ ಆಕ್ಷೇಪಣೆಗಳನ್ನು ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

12/11/2021 07:42 pm

Cinque Terre

11.41 K

Cinque Terre

0

ಸಂಬಂಧಿತ ಸುದ್ದಿ