ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೌರ ಕಾರ್ಮಿಕರ ಪಿಎಫ್ ವಂತಿಗೆ ತುಂಬದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ

ಧಾರವಾಡ: ಪೌರ ಕಾರ್ಮಿಕ ಪಿಎಫ್ ವಂತಿಗೆ ಹಣವನ್ನು ತುಂಬದೇ ಇರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ. ಇಂತಹ ಗುತ್ತಿಗೆದಾರರಿಗೆ ಪಾಲಿಕೆಯ ಯಾವುದೇ ಕಾಮಗಾರಿ ಅಥವಾ ಹೊರ ಗುತ್ತಿಗೆ ನೌಕರರ ಸಬರಾಜಿಗೂ ಅನುಮತಿ ನೀಡಬೇಡಿ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಜರುಗಿದ ಸಫಾಯಿ ಕರ್ಮಚಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

58 ಲಕ್ಷ ಪಿಎಫ್ ಹಣದಲ್ಲಿ 24 ಲಕ್ಷ ಹಣವನ್ನು ಗುತ್ತಿಗೆದಾರ ತುಂಬಿದ್ದಾರೆ. ಈ ಹಣವನ್ನು ಪೌರಕಾರ್ಮಿಕ ಪಿಎಫ್ ಖಾತೆಗೆ ತುಂಬಲಾಗಿದೆ. ಬಾಕಿ ಇರುವ 24 ಲಕ್ಷ ಹಣವನ್ನು ತುಂಬಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸಭೆಗೆ ಮಾಹಿತಿ ನೀಡಿದರು.

ಸದ್ಯ ಪಿಎಫ್ ಖಾತೆಗೆ ಜಮೆ ಮಾಡಿದ 24 ಲಕ್ಷ ಹಣ ಯಾರ ಖಾತೆಗೆ ಜಮೆಯಾಗಿದೆ ಎಂಬುದನ್ನು ಪಾಲಿಕೆ ವೆಬ್ ಸೈಟ್‌ನಲ್ಲಿ ಪ್ರಕಟಿಸಿ. ಬಾಕಿ 24 ಲಕ್ಷ ತುಂಬಿದ ಮೇಲೆಯೇ ಗುತ್ತಿಗೆದಾರನ್ನು ಕಪ್ಪು ಪಟ್ಟಿಯಿಂದ ತೆಗೆಯಿರಿ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೀನಾಕ್ಷಿ ಮಾತನಾಡಿ, ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ನೇರ ಸಾಲಕ್ಕೆ ಅರ್ಜಿ ಸಲ್ಲಿಸಿದ 38 ಜನರಲ್ಲಿ 32 ಜನರಿಗೆ ಸಾಲ ಮಂಜೂರು ಮಾಡಲಾಗಿದೆ. 716 ಜನರಿಗೆ ನೇರ ಸಾಲ ಮಂಜೂರಾತಿ ಗುರಿಯಿದೆ. ಸಫಾಯಿ ಕರ್ಮಚಾರಿ ಸಂಘಗಳಿಗೆ 75:25 ಅನುಪಾತದಲ್ಲಿ ಸಕ್ಕಿಂಗ್, ಜಟ್ಟಿಂಗ್ ಮಷಿನ್ ಕೊಳ್ಳಲು ಅನುದಾನ ಒದಗಿಸಲಾಗುವುದು. ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಉಚಿತ ಟ್ಯಾಬ್ ನೀಡಲು, ಸಫಾಯಿ ಕರ್ಮಚಾರಿ ಮಹಿಳೆಯರಿಗೆ ಶೇ.90 ಸಬ್ಸಿಡಿಯಲ್ಲಿ ಸ್ಕೂಟಿ ಖರೀದಿಸಲು ನೆರವು ನೀಡಲಾಗುವುದು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟಣೆ ನೀಡಲಾಗಿದೆ. ಆದರೂ ಸಾಕಷ್ಟು ಪ್ರಮಾಣದಲ್ಲಿ ಅರ್ಜಿಗಳು ಬಂದಿಲ್ಲ ಎಂದು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಖಾಲಿ ಇರುವ ಸಫಾಯಿ ಕರ್ಮಚಾರಿಗಳ ನೇಮಕವನ್ನು ಆದಷ್ಟು ಬೇಗ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ನಂತರ ಎಸ್.ಟಿ.ಪಿ ಹಾಗೂ ಟಿ.ಎಸ್.ಪಿ ಅನುದಾನದ ಬಳಕೆ ಕುರಿತು ಸಭೆ ಜರುಗಿತು.

Edited By : Vijay Kumar
Kshetra Samachara

Kshetra Samachara

10/11/2021 10:26 pm

Cinque Terre

7.88 K

Cinque Terre

0

ಸಂಬಂಧಿತ ಸುದ್ದಿ