ಧಾರವಾಡ: ಧಾರವಾಡ ರಂಗಾಯಣದ ಆಡಳಿತಾಧಿಕಾರಿಯಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಹೆಚ್ಚುವರಿ ಪ್ರಭಾರ ಅಧಿಕಾರ ವಹಿಸಿಕೊಂಡರು. ಇದುವರೆಗೆ ಈ ಹುದ್ದೆಯ ಪ್ರಭಾರ ಅಧಿಕಾರ ಹೊಂದಿದ್ದ ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಅಧಿಕಾರ ಹಸ್ತಾಂತರಿಸಿದರು.
ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ, ರಂಗಾಯಣವು ಅನನ್ಯ ಸಾಂಸ್ಕೃತಿಕ ಘಟಕವಾಗಿದ್ದು, ಇಲ್ಲಿನ ಸೇವಾ ಅವಧಿಯು ತೃಪ್ತಿ ಮತ್ತು ಸಂತಸ ನೀಡಿದೆ. ಕಂದಾಯ ಇಲಾಖೆಯ ಅಧಿಕ ಕಾರ್ಯಭಾರದಿಂದಾಗಿ ರಂಗಾಯಣದ ಆಡಳಿತಾಧಿಕಾರಿ ಜವಾಬ್ದಾರಿಯನ್ನು ಹಸ್ತಾಂತರಿಸುತ್ತಿದ್ದೇನೆ, ಸೇವಾವಧಿಯಲ್ಲಿ ನಿರ್ದೇಶಕರು, ಸಿಬ್ಬಂದಿ, ರಂಗಾಸಕ್ತರು ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/02/2021 09:23 pm