ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜ.29ಕ್ಕೆ ಪರಿಶಿಷ್ಟ ಜಾತಿ ಕಾಯ್ದೆ ಕುರಿತು ತಾಲೂಕು ಮಟ್ಟದ ಕಾರ್ಯಾಗಾರ

ಕುಂದಗೋಳ: ತಾಲೂಕಿನ ಚಾಕಲಬ್ಬಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ತಾಲೂಕಾ ಆಡಳಿತ, ತಾಲೂಕ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ, ಕುಂದಗೋಳ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 29 (ಶುಕ್ರವಾರ) ಬೆಳಿಗ್ಗೆ 10.30ಕ್ಕೆ ಅನುಸೂಚಿತ ಜಾತಿ ಅನುಸೂಚಿತ ಪಂಗಡದವರ ಕಾಯ್ದೆ ಹಾಗೂ ಸೌಲಭ್ಯಗಳ ಕುರಿತು ಒಂದು ದಿನದ ತಾಲೂಕು ಮಟ್ಟದ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕುಂದಗೋಳ ತಾಲೂಕು ತಹಶೀಲ್ದಾರ್ ಬಸವರಾಜ ಮೆಳವಂಕಿ ಮತ್ತು ಇನ್ಸ್‌ಪೆಕ್ಟರ್ ಬಸವರಾಜ ಕಲ್ಲಮ್ಮನವರ ಆಗಮಿಸಲಿದ್ದಾರೆ. ಉಪನ್ಯಾಸಕರಾಗಿ ಡಾ. ಅಂಬೇಡ್ಕರ್ ಸಮುದಾಯ ಪ್ರಗತಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ. ಲಕ್ಷ್ಮಣ.ಸಿ.ಬುಕ್ಕಾಯಿ ಆಗಮಿಸಿ 'ದೌರ್ಜನ್ಯ ಪ್ರತಿಬಂಧ ಅಧಿನಿಯಮ 1889 ಹಾಗೂ 2015 ಮತ್ತು ನಿಯಮಗಳು 1995 ಮತ್ತು ಪರಿಷ್ಕೃತ ನಿಯಮಗಳ 2016 ಎಸ್.ಸಿ.ಪಿ /ಟಿ.ಎಸ್.ಪಿ ಕಾಯ್ದೆ ಮತ್ತು ನಿಯಮಗಳು ಕುರಿತು ಉಪನ್ಯಾಸ ನೀಡಲಿದ್ದಾರೆ.

ಇನ್ನೋರ್ವ ಉಪನ್ಯಾಸಕರಾಗಿ ಅಶೋಕ ಕ್ಯಾರಕಟ್ಟಿ ಆಗಮಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಜಮೀನು ಪರಭಾರೆ ಅಧಿನಿಯಮ ಹಾಗೂ ನಾಗರೀಕ ಹಕ್ಕುಗಳು ಸಂರಕ್ಷಣಾ ನಿಯಮಗಳು ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಯುವ ಜನ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರ್ಲಾಪುರ ಇವರಿಂದ ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ.

Edited By : Vijay Kumar
Kshetra Samachara

Kshetra Samachara

28/01/2021 08:19 pm

Cinque Terre

13.26 K

Cinque Terre

0

ಸಂಬಂಧಿತ ಸುದ್ದಿ