ವರುಣನ ಆರ್ಭಟಕ್ಕೆ ಉಕ್ಕಿದ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಸೇರಿದಂತೆ ಹಲವು ಹಳ್ಳಗಳು ಅಪಾಯ ಮಟ್ಟವನ್ನು ಮೀರಿದ್ದವು. ಇದರಿಂದ ತತ್ತರಿಸಿದ ನವಲಗುಂದ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆ ಗುರುವಾರ ಅತಿವೃಷ್ಟಿ ಹಾನಿಯ ಅಧ್ಯಯನಕ್ಕಾಗಿ ಭಾರತ ಸರ್ಕಾರದ ಅಂತರ್ ಸಚಿವಾಲಯ ಅಧ್ಯಯನ ತಂಡವು ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದವು.
ಹೌದು.. ಕೇಂದ್ರ ಜಲಶಕ್ತಿ ಮಂತ್ರಾಲಯದ ಅಶೋಕ ಕುಮಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಅಧೀಕ್ಷಕ ಇಂಜಿನೀಯರ ವಿ.ವಿ.ಶಾಸ್ತ್ರಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ನೇತೃತ್ವದಲ್ಲಿ ಅತಿವೃಷ್ಟಿ ಅಧ್ಯಯನ ತಂಡ ಪ್ರವಾಸ ಕೈಗೊಂಡಿತ್ತು. ಅವರೊಂದಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ್ ಸಿಇಓ ಸುರೇಶ ಇಟ್ನಾಳ್ ಸಾಥ್ ನೀಡಿದರು.
ತಂಡವು ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಗ್ರಾಮದಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಪ್ರವಾಹ ಪೀಡಿತ ಹತ್ತಿ, ಮೆಕ್ಕೆಜೋಳ, ಹೆಸರುಕಾಳು, ಉದ್ದು, ಉಳ್ಳಾಗಡ್ಡಿ ಬೆಳೆಗಳನ್ನು ಹಾಗೂ ಹಾನಿಗೊಳಗಾದ ಮನೆಗಳನ್ನು ಹಾಗೂ ಹೆಬಸೂರಿನ ಶಾಲಾ ಕಟ್ಟಡ ವೀಕ್ಷಿಸಿದರು.
ನಂತರ ನವಲಗುಂದ ತಾಲ್ಲೂಕಿನ ಕಾಲವಾಡ, ಯಮನೂರಿಲ್ಲಿ ಉದ್ದು ಹಾಗೂ ಹೆಸರಿನ ಬಾಧಿತ ಪ್ರದೇಶಗಳನ್ನು ವೀಕ್ಷಿಸಿ, ಖನ್ನೂರಿನಲ್ಲಿ ಹಾನಿಗೊಳಗಾದ ಸೇತುವೆ, ಭೋಗಾನೂರಿನಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರ ಹಾಗೂ ಮನೆಗಳ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರು.
Kshetra Samachara
08/09/2022 03:00 pm