ಮಳೆಗಾಲವಿರಲಿ ಚಳಿಗಾಲವಿರಲಿ, ಎಂತಹ ವಿಷಪೂರಿತ ಸೋಂಕು ಹರಡಲಿ, ಯಾವುದೇ ಸಮಯದಲ್ಲಿಯೂ ಪೌರಕಾರ್ಮಿಕರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಗರವನ್ನು ಸ್ವಚ್ಛ ಮಾಡಲು ಪಣ ತೊಟ್ಟಿರುತ್ತಾರೆ. ಆದರೆ ಅವರ ಜೀವದ ಮಾಲೀಕ ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಹೌದು… ಹುಬ್ಬಳ್ಳಿ ಧಾರವಾಡದಲ್ಲಿ ಪೌರಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ.ನಗರವನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಯಾವುದೇ ಪ್ರಾಣ ಹಾನಿ, ಅಪಘಾತವಾದರೆ ಅವರಿಗೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಸಣ್ಣ ಸಂಬಳದಲ್ಲಿ ಇಡೀ ನಗರವನ್ನೇ ಸ್ವಚ್ಛ ಮಾಡುವ ಈ ಪೌರಕಾರ್ಮಿಕರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯವೇಕೆ?
ತಮ್ಮ ಪ್ರಾಣವನ್ನು ಲೆಕ್ಕಿಸದೇ, ಸ್ವಚ್ಛತಾ ಕೆಲಸ ಮಾಡುವುದು ಸಾಮಾನ್ಯ ಕೆಲಸವಲ್ಲ. ಆದ್ರೆ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾಗ ಏನಾದರು ಅಪಘಾತದಲ್ಲಿ ಸಾವನ್ನಪ್ಪಿದರೆ ಒಂದು ನಯಾ ಪೈಸೆನೂ ಸಿಗಲ್ಲ. ಮಹಾಮಾರಿ ಕೊರೋನಾದಂತಹ ಸಂದರ್ಭದಲ್ಲಿ ಇಡೀ ದೇಶವೇ ಮನೆಯಲ್ಲಿದ್ದಾಗ, ಇವರು ಮಾತ್ರ ತಮ್ಮ ಪ್ರಾಣ ಲೆಕ್ಕಿಸದೇ ನಗರವನ್ನು ಸ್ವಚ್ಛ ಮಾಡಿದ್ದಾರೆ. ಆದರೆ ಈ ಕಾರ್ಯ ಯಾರ ಕಣ್ಣಿಗೂ ಕಾಣುವುದಿಲ್ವಾ? ಇಲ್ಲವೇ ಕಣ್ಣಿದ್ದೂ ಕುರುಡರಾಗಿದ್ದಾರೆಯೇ?
ಎಲ್ಲರಿಗೂ ಸ್ವಚ್ಛತಾ ಕಾರ್ಯಕ್ಕೆ ಪೌರಕಾರ್ಮಿಕರು ಬೇಕೇ ಬೇಕು. ಆದರೆ ಅವರಿಗೆ ಕಷ್ಟ ಅಂತ ಬಂದಾಗ ಯಾರು ಕ್ಯಾರೇ ಅನ್ನಲ್ಲ ಯಾಕೆ? ಪೌರ ಕಾರ್ಮಿಕರ ಪ್ರಾಣಕ್ಕೆ ಬೆಲೆಯೇ ಇಲ್ಲವೆ ಎಂಬುದು ಪೌರಕಾರ್ಮಿಕರ ಪ್ರಶ್ನೆಯಾಗಿದೆ
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/07/2022 05:20 pm