ನವಲಗುಂದ: ಒಂಬತ್ತನೆ ದಿನದ ಗಣಪತಿ ವಿಸರ್ಜನೆ ಹಿನ್ನೆಲೆ ಶನಿವಾರ ತಾಲ್ಲೂಕಿನಾದ್ಯಂತ ಮದ್ಯಮಾರಾಟ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದ್ದು, ಈ ಹಿನ್ನಲೆ ಪಟ್ಟಣದಲ್ಲಿನ ಮದ್ಯದಂಗಡಿಗಳಿಗೆ ಬಾಗಿಲು ಹಾಕಲಾಗಿದ್ದವು.
ಹೌದು ಈಗಾಗಲೇ ಐದನೇ ದಿನದ ಗಣಪ ವಿಸರ್ಜನೆ ಮತ್ತು ಏಳನೇ ದಿನದ ಗಣಪ ವಿಸರ್ಜನೆಗೆ ಮದ್ಯ ನಿಷೇಧಿಸಿದಂತೆ, ಒಂಬತ್ತನೆ ದಿನದ ವಿನಾಯಕನ ವಿದಾಯಕ್ಕೂ ಮದ್ಯದಂಗಡಿಗಳ ಬಾಗಿಲು ಮುಚ್ಚಿಸಲಾಗಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತೈದೃಷ್ಟಿಯಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
Kshetra Samachara
18/09/2021 01:20 pm