ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೂಡಲೇ ಮಳೆ ಹಾನಿ ಪರಿಹಾರ ಸಿಗಲಿದೆ; ಸಚಿವ ಹಾಲಪ್ಪ ಭರವಸೆ

ಜಿಲ್ಲಾ ಖಜಾನೆಯಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಯಾವುದೇ ರೀತಿ ಹಣದ ತೊಂದರೆ ಇಲ್ಲ. ಪರಿಹಾರಕ್ಕಾಗಿ ನಾಳೆ ಎನ್ನುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಜಿಲ್ಲೆಯ ಪ್ರವಾಸ ಕೈಗೊಂಡಿರುವ ವೇಳೆಯಲ್ಲಿ ಯಲಿವಾಳ ಗ್ರಾಮದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರ ನಿರ್ದೇಶನ ನೀಡದಂತೆ ಭಾಗಶಃ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ, 50% ನಿಂದ 75% ಹಾನಿಯಾಗಿದ್ದವರಿಗೆ 3 ಲಕ್ಷ ಹಾಗೂ ಮನೆಯಲ್ಲಿ ದವಸ ಧಾನ್ಯಗಳು ಹಾನಿಯಾಗಿರುವರಿಗೆ ಹತ್ತು ಸಾವಿರ ಹೀಗೆ ಎನ್‌ಡಿಆರ್ಎಫ್ ಡೈರೆಕ್ಷನ್ ಮೂಲಕ ನೀಡಲಾಗುತ್ತದೆ. ಜಿಲ್ಲಾ ಖಜಾನೆಯಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಯಾವುದೇ ರೀತಿಯಲ್ಲಿ ಹಣದ ತೊಂದರೆ ಇಲ್ಲ ಕೂಡಲೇ ಪರಿಹಾರ ನೀಡಲಾಗುತ್ತದೆ ಎಂದರು.

ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿರುವ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬೊಮ್ಮಾಯಿಯವರ ನೇತೃತ್ವದಲ್ಲಿ ಯಾವುದೇ ತಾರತಮ್ಯ ಆಗಿಲ್ಲ, ಆಗುವುದಿಲ್ಲ. ಇಲ್ಲ ಎನ್‌ಡಿಆರ್ಎಫ್ ನಿರ್ದೇಶನದಂತೆ ಅರ್ಹ ಫಲಾನುಭವಿಗಳಿಗೆ ಸೂಕ್ತವಾದ ಪರಿಹಾರ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಜೂನ್‌ನಿಂದ ಅಗಸ್ಟ ತಿಂಗಳವರೆಗೆ ಮಳೆಯಿಂದ ಹಾನಿಯಾಗಿರುವ ಹಾಗೂ ಈ ಹಿಂದೆ ತಾಂತ್ರಿಕ ತೊಂದರೆಯಿಂದ ಪರಿಹಾರ ಸಿಗದೇ ಇರುವವರಿಗೆ ಕೂಡಲೇ ಪರಿಹಾರ ಕಲ್ಪಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಲಿದೆ ಎಂದು ಅವರು ಭರವಸೆ ನೀಡಿದರು.

Edited By :
Kshetra Samachara

Kshetra Samachara

13/07/2022 01:27 pm

Cinque Terre

21.36 K

Cinque Terre

0

ಸಂಬಂಧಿತ ಸುದ್ದಿ