ದಿನಕ್ಕೆ ಸಾವಿರಾರು ಜನ ಸಂಚರಿಸುವ ಜನನಿಬಿಡ ಪ್ರದೇಶದಲ್ಲಿ ವಿದ್ಯುತ್ ಕಂಬ ಈಗ ಆತಂಕವನ್ನು ಸೃಷ್ಟಿಸಿದೆ. ವಿದ್ಯುತ್ ಕಂಬಕ್ಕೆ ಯಾವುದೇ ಸುರಕ್ಷೆ ಇಲ್ಲದಿರುವುದು, ಈಗ ಅವಘಡಕ್ಕೆ ಆಹ್ವಾನ ನೀಡುವಂತಿದೆ ಎಂಬ ಆತಂಕ
ಸಾರ್ವಜನಿಕರಲ್ಲಿ ಮೂಡಿದೆ.
ಹೌದು ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೆ ಇರುವ ವಿದ್ಯುತ್ ಕಂಬದ ವೈರಿಂಗ್ ಓಪನ್ ಆಗಿದೆ. ಇದರಿಂದಾಗಿ ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಅಪಾಯ ಕಡಿಮೆ ಇದ್ರೂ ಸಹ ಇಲ್ಲಿ ಸಂಚರಿಸುವ ಬೃಹತ್ ಗಾತ್ರದ ವಾಹನಗಳು ಕಂಬಕ್ಕೆ ಸ್ಪರ್ಶಸಿದ್ದೆ ಆದಲ್ಲಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ.
ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಾಗ ಅದನ್ನ ಸರಿ ಪಡಿಸುವ ಭರವಸೆ ನೀಡಿದ್ದಾರೆ. ಕಂಬವನ್ನು ಇಲ್ಲಿಂದ ಬೇರೆಡೆ ಸ್ಥಳಾಂತರಿಸುವುದಾಗಿ ಸಹ ತಿಳಿಸಿದ್ದಾರೆ. ಆದಷ್ಟು ಬೇಗ ಈ ಕೆಲಸ ಆಗಬೇಕು ಎಂಬುದು ಸಹ ಸ್ಥಳೀಯರ ಆಗ್ರಹವಾಗಿದೆ.
Kshetra Samachara
30/05/2022 12:05 pm