ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ನಾರ್ತ್ ಕರ್ನಾಟಕ ಐಡಲ್" ಸಂಗೀತ ಸ್ಪರ್ಧೆ ; ಜುಲೈ 1ರಿಂದ ಆಡಿಶನ್

ಹುಬ್ಬಳ್ಳಿ: ಧಾರವಾಡ ಜಿಲ್ಲಾ ವಿದ್ಯಾವೃಂದ ಕಲಾವಿದರ ಸಂಘದ ವತಿಯಿಂದ "ನಾರ್ತ್ ಕರ್ನಾಟಕ ಐಡಲ್" ಸಂಗೀತ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಜಾಡರ ಹೇಳಿದರು.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಸ್ವರ್ಣ ಗ್ರೂಪ್ ಆಫ್ ಕಂಪನಿ ಮಾಲೀಕ ವಿ.ಎಸ್.ವಿ. ಪ್ರಸಾದ್ ಕೂಡ ಸಹಾಯ ಮಾಡಿದ್ದಾರೆ ಎಂದರು.

ಈ ಸಂಗೀತ ಸ್ಪರ್ಧೆಯ ಆಡಿಷನ್ ಜುಲೈ1ರಿಂದ 4ರ ವರೆಗೆ ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆ ಹತ್ತಿರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಅವರು, ಈ ಸ್ಪರ್ಧೆಯಲ್ಲಿ 10ರಿಂದ 21 ವರ್ಷದ ಒಳಗಿನವರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448271510, 8618436725 ಸಂಪರ್ಕಿಸಬಹುದು ಎಂದು ಹೇಳಿದರು.

Edited By :
Kshetra Samachara

Kshetra Samachara

29/06/2022 01:57 pm

Cinque Terre

21.73 K

Cinque Terre

0

ಸಂಬಂಧಿತ ಸುದ್ದಿ