ಹುಬ್ಬಳ್ಳಿ :ಮಕ್ಕಳು ಹಾಗೂ ಯುವಕರೇ ರಂಗಭೂಮಿ ಉಳಿಸುವ ನಿಜವಾದ ವಾರಸುದಾರರು. ಇಂತಹ ಪರಿಸ್ಥಿತಿಯಲ್ಲಿ ಅವರಲ್ಲಿ ರಂಗಭೂಮಿ ಕುರಿತಂತೆ ಆಸಕ್ತಿ ಮೂಡಿಸಿ, ಅಭಿನಯ ತರಬೇತಿ ನೀಡುತ್ತಿರುವ ಸುನಿಧಿ ಕಲಾ ಸೌರಭ ಸಂಸ್ಥೆ ಕಾರ್ಯ ಸ್ತುತ್ಯಾರ್ಹ ಎಂದು ಖ್ಯಾತ ರಂಗ ಕರ್ಮಿ ಡಾ: ಶಶಿಧರ ನರೇಂದ್ರ ನುಡಿದರು.
ಇಲ್ಲಿಯ ರಾಜಾಜಿನಗರದ ಚೈತನ್ಯ ಧಾಮ ದಲ್ಲಿ ದಿ 27 ರಂದು ಸಂಜೆ ಸುನಿಧಿ ಕಲಾ ಸೌರಭ ಸಂಸ್ಥೆ ಆಯೋಜಿಸಿದ್ದ ರಂಗ ತರಬೇತಿ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ: ಲಿಂಗರಾಜ ಅಂಗಡಿ, ಯುವಕರನ್ನು ರಂಗಕ್ಕೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಲಿ, ಆ ಮೂಲಕ ಹೊಸ ತಲೆಮಾರಿನ. ಪ್ರತಿಭೆಗಳು. ಬೆಳಕಿಗೆ ಬರಲಿ ಎಂದು ಹಾರೈಸಿದರು.
ಇನ್ನೊಬ್ಬ ಅತಿಥಿ ಮಾಜಿ ಸಂಸದ ಪ್ರೊ ಐ ಜಿ. ಸನದಿ ಅವರು ಯಾವದೇ ಪ್ರತಿಫಲವನ್ನು ಬಯಸದೇ ಉಚಿತವಾಗಿ ಆಯೋಜಿಸುತ್ತಿರುವ ಇಂತಹ ಕಾರ್ಯಾಗಾರಗಳು ಇತರರಿಗೆ ಮಾದರಿ ಯಾಗಿದೆ ಎಂದು, ಆಧುನಿಕ ರಂಗಭೂಮಿ ಕಟ್ಟುವಲ್ಲಿ ಇದರ ರೂವಾರಿ ಧಾರವಾಡ ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅವರ ಸಾಹಸಕ್ಕೆ ಯಾವತ್ತೂ ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು.
Kshetra Samachara
28/06/2022 09:04 pm