ಹುಬ್ಬಳ್ಳಿ: ಮೊಬೈಲ್ ಅಂದರೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ನಂಟು ಇದ್ದೆ ಇರುತ್ತದೆ. ಇಂತಹ ಮೊಬೈಲ್ ನಂಟಿನ ಬಗ್ಗೆ ನಮ್ಮ ಉತ್ತರ ಕರ್ನಾಟಕದ ಜಾನಪದ ಕಲಾವಿದ ತನ್ನ ಸಾಹಿತ್ಯ ಮೂಲಕ ವಿನೂತನ ಪ್ರಯತ್ನದಿಂದ ಸಂಗೀತ ಪ್ರೀಯರಿಗೆ ಹಾಡೊಂದನ್ನು ಪ್ರಸ್ತುತ ಪಡಿಸಿದ್ದಾರೆ.
ಹೌದು... ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಬಸವರಾಜ ಗುದ್ದಿನ ಎಂಬುವಂತ ಕಲಾವಿದ ಮೊಬೈಲ್ ಬಗ್ಗೆ ತಮ್ಮದೇ ಆದ ಸಂಗೀತ ಸಂಯೋಜನೆ ಮೂಲಕ ಅಭಿನಯಿಸಿ ಹಾಡಿಗೆ ಧ್ವನಿ ನೀಡಿದ್ದಾರೆ. ಸಾಕಷ್ಟು ಭಜನಾ ಪದ ಹಾಗೂ ಜಾನಪದ ಸಾಹಿತ್ಯದ ಮೂಲಕ ಜನಮನ ಗೆದ್ದಿರುವ ಕಲಾವಿದ ಬಸವರಾಜ ಈಗ ಮೊಬೈಲ್ ಕುರಿತಾಗಿ ಇಕಿ ಅದಾಳ ಎಪ್ಪಾ ಬಾಳ ಬೆರಕಿ ಎಂಬುವಂತ ಜವಾರಿ ಭಾಷೆಯಲ್ಲಿ ವಿಡಿಯೋ ಸಾಂಗ್ ವೊಂದನ್ನು ಬಿಡುಗಡೆ ಮಾಡಿದ್ದಾರೆ.
ಭಜನಾ ಪದದ ಸಾಹಿತ್ಯ ಬ್ರಹ್ಮ ಎಂದೇ ಖ್ಯಾತಿ ಪಡೆದ ಭೈರಿದೇವರಕೊಪ್ಪದ ಸದಾನಂದ ವಾಲಿಕಾರ ಮಾಸ್ತರ ಶಿಷ್ಯರಾದ ಬಸವರಾಜ ಗುದ್ದಿನ ಅವರು ಸುಮಾರು ವರ್ಷಗಳ ಕಾಲ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಪ್ರಾಥಮಿಕ ಶಾಲೆ ಶಿಕ್ಷಕರಾಗಿರುವ ಇವರು ತಮ್ಮದೇ ಆದ ಸಾಹಿತ್ಯದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ.
ಪಂಚಮಿ ಹಬ್ಬ, ಶಾಲೆಯ ತರಗತಿ ಹಾಗೂ ಲಾಕ್ ಡೌನ್ ಕುರಿತಾದ ಸಾಕಷ್ಟು ವಿಡಿಯೋ ಸಾಂಗ್ ಬಿಡುಗಡೆ ಮಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಉತ್ತರ ಕರ್ನಾಟಕದ ಜಾನಪದ ಸಾಹಿತ್ಯವನ್ನು ರಾಜ್ಯದ ಆಚೆಗೂ ಪರಿಚಯಿಸುವ ಕಾರ್ಯವನ್ನು ಬಸವರಾಜ ಮಾಡುತ್ತಿದ್ದಾರೆ. ಇವರ ಸಾಹಿತ್ಯದ ಕೃಷಿ ಮತ್ತಷ್ಟು ವ್ಯಾಪಕವಾಗಿ ಹರಡಲಿ ಎಂಬುವುದು ನಮ್ಮ ಆಶಯ...
Kshetra Samachara
26/11/2021 10:07 pm