ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪುಟಾಣಿಗಳಿಗಾಗಿ ಪ್ಯಾಷನ್ ಶೋ ಆಯೋಜನೆ

ಧಾರವಾಡ: ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಧಾರವಾಡ ವತಿಯಿಂದ ಅಕ್ಟೋಬರ್ 9ರಂದು ಪುಟಾಣಿ ಮಕ್ಕಳಿಗಾಗಿ 'ಕಿಫ್ ಪ್ರಿನ್ಸ್ ಆ್ಯಂಡ್ ಪ್ರಿನ್ಸಸ್ಸ್' ಹೆಸರಿನಡಿ 6 ವರ್ಷದಿಂದ 12 ವರ್ಷ ಹಾಗೂ 13 ವರ್ಷದಿಂದ 17 ವರ್ಷದ ಮಕ್ಕಳಿಗೆ ಪ್ಯಾಷನ್ ಶೋ ಆಯೋಜಿಸಲಾಗಿದೆ ಎಂದು ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎ.ಮುಮ್ಮಿಗಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ತೂರಿನಲ್ಲಿರುವ ಹೋಟೆಲ್ ಟ್ರಾವೆಲ್ ಇನ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸಿದ ಮಕ್ಕಳಿಗೆ ಕನ್ನಡ, ಹಿಂದಿ ಹಾಗೂ ಅನೇಕ ಭಾಷೆಗಳಲ್ಲಿ ಚಲನಚಿತ್ರ, ಸಿರಿಯಲ್, ಕಿರು ಚಿತ್ರಗಳಲ್ಲಿ, ವೆಬ್ ಸಿರಿಸ್, ಮ್ಯಾಗಜಿನ್ ಶೂಟ್, ಕ್ಯಾಲೆಂಡರ್ ಶೂಟ್, ರಿಯಾಲಿಟಿ ಶೋ ಜಾಹೀರಾತುಗಳಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಅಂದು ಚಲನಚಿತ್ರದ ದಿಗ್ಗಜರು ನಿರ್ಣಾಯಕರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಭಾಗವಹಿಸಿದ ಎಲ್ಲ ಮಕ್ಕಳಿಗೆ 2 ದಿನದ ತರಬೇತಿ ನೀಡಲಾಗುವುದು ಜೊತೆಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಲಾಗುವುದು. ವಿಜೇತರನ್ನು ನವೆಂಬರ್ 11 ರಿಂದ 21 ರಂದು ಹಮ್ಮಿಕೊಂಡಿರುವ ಕರ್ನಾಟಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಲಾಗುವುದು ಎಂದರು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ-7483673211, 9113653959ಕ್ಕೆ ಸಂಪರ್ಕಿಸಬಹುದು.

Edited By : PublicNext Desk
Kshetra Samachara

Kshetra Samachara

22/09/2021 01:12 pm

Cinque Terre

16.44 K

Cinque Terre

1

ಸಂಬಂಧಿತ ಸುದ್ದಿ