ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಂಗಭೂಮಿಯಿಂದ ಚಿತ್ರರಂಗದತ್ತ ‘ಸೈಕಲ್ ಡ್ರೀಮ್ಸ್’ ಟೀಮ್;ವೆಬ್ ಸಿರೀಸ್ ಮೂಲಕ ಅರ್ಪಣೆ

ಹುಬ್ಬಳ್ಳಿ: ರಂಗಭೂಮಿಯಿಂದ ಚಿತ್ರರಂಗದತ್ತ ‘ಸೈಕಲ್ ಡ್ರೀಮ್ಸ್’ ಟೀಂ ಮುನ್ನಡೆಯುತ್ತಿದೆ‌. ಬಿಗ್ ಸ್ಕ್ರೀನ್ ಸಿನಿಮಾ, ಸ್ಮಾಲ್ ಸ್ಕ್ರೀನ್ ಸಿರೀಯಲ್‍ಗಳ ನಡುವೆ ಇತ್ತೀಚೆಗೆ ಭರ್ಜರಿ ಸದ್ದು ಮಾಡುತ್ತಿರುವುದು ವೆಬ್ ಸಿರೀಸ್. ಹೀಗಾಗಿ ದೊಡ್ಡ ದೊಡ್ಡ ಸ್ಟಾರ್ ನಟ, ನಟಿಯರು ಕೂಡಾ ವೆಬ್ ಸಿರೀಸ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಸ್ಯಾಂಡಲ್‍ವುಡ್‍ನಲ್ಲಿಯೂ ಇದರ ಗಾಳಿ ಬೀಸುತ್ತಿದೆ. ಸಿನಿಮಾ ರಂಗದಲ್ಲಿ ಇರುವವರು ವೆಬ್ ಸಿರೀಸ್ ಮಾಡುವುದು ಕಾಮನ್. ಆದರೆ, ಪತ್ರಿಕಾ ರಂಗದಲ್ಲಿ ಇರುವವರು ವೆಬ್ ಸಿರೀಸ್ ಮಾಡುತ್ತಿರುವುದು ವಿಶೇಷವಾಗಿದೆ.

ಸೈಕಲ್ ಡ್ರೀಮ್ಸ್ ಹೆಸರಿನ ತಂಡವೊಂದು ‘ಅರ್ಪಣೆ’ ಅನ್ನೋ ವೆಬ್ ಸಿರೀಸ್ ಮಾಡುತ್ತಿದೆ. ಕಳೆದ ಜನವರಿ 1, 2021ರಂದು ಬೆಂಗಳೂರಿನಲ್ಲಿ ‘ಹಾಫ್’ ಚಿತ್ರದ ಸಹಯೋಗದೊಂದಿಗೆ ಟೈಟಲ್ ಬಿಡುಗಡೆಗೊಳಿಸಿದೆ.ಸಾಹಿತ್ಯ ಹಾಗೂ ರಂಗಭೂಮಿಯ ಒಡನಾಟ ಹೊಂದಿರುವ ಈ ತಂಡ ಈಗಾಗಲೇ ಸಾಕಷ್ಟು ವಿಭಿನ್ನ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ.

ಕವಿ-ಕಾವ್ಯ-ಗಾಯನ, ಕಾವ್ಯ ಸಂಜೆ, ಕಾವ್ಯ ಓದು ಎನ್ನುವ ಕಾರ್ಯಕ್ರಮದ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ. ಇದರ ಜೊತೆಗೆ ಬಾರಯ್ಯ ಬೆಳದಿಂಗಳೆ(ಪ್ರತಿ ಹುಣ್ಣಿಮೆಗೆ ಜಾನಪದ ಗಾಯನ), ಮನೆ-ಮನಗಳಲ್ಲಿ ಜಾನಪದ, ರಂಗ ನಮನ ಹೆಸರಿನ ಕಾರ್ಯಕ್ರಮದೊಂದಿಗೆ ಜಾನಪದ ಕೆಲಸ ಮಾಡುತ್ತಿದೆ. 2017ರಲ್ಲಿ ಯುವ ಬರಹಗಾರ ನಾಗೇಶ ತಳವಾರ ಅವರ ‘ಕಾಡು’ ಕಥೆ ಆಧಾರಿತ ‘ಸೈಕಲ್ ಡ್ರೀಮ್ಸ್’ ನಾಟಕವನ್ನ, ಯಶವಂತ ಕಾರ್ಗಳ್ಳಿ ಅವರ ನಿರ್ದೇಶನದಲ್ಲಿ ಧಾರವಾಡ ರಂಗಾಯಣದಲ್ಲಿ ಪ್ರದರ್ಶನ ಮಾಡಲಾಗಿದೆ.

2019ರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರೊ.ರಾಜಪ್ಪ ದಳವಾಯಿ ಅವರ ‘ಅಯಾಸಿಸ್’ ಅನ್ನೋ ಈಜಿಪ್ಟ್ ನಾಟಕವನ್ನ ಯಶವಂತ ಕಾರ್ಗಳ್ಳಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಗಿದೆ.ಹೀಗೆ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಪತ್ರಕರ್ತರ ತಂಡದಲ್ಲಿ ಧಾರವಾಡ, ವಿಜಯಪುರ, ಬೆಂಗಳೂರು, ಮೈಸೂರು, ಬೆಳಗಾವಿ ಭಾಗದ ಪ್ರತಿಭೆಗಳಿವೆ. ಮೈಸೂರು ರಂಗಾಯಣ, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ನಾಟಕ ಶಾಲೆಯ ಹಲವು ದಿಗ್ಗಜ ಕಲಾವಿದರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಾಗೇಶ ತಳವಾರ, ಯಶವಂತ ಕಾರ್ಗಳ್ಳಿ, ವಿಜಯಕುಮಾರ ಪೂಜಾರಿ, ಪ್ರಕಾಶ ಏಳಗುಡ್ಡ, ಶಬ್ಬೀರ ಸೂಡಿ, ಲಕ್ಷ್ಮಣ ಬೆಳಗಾವಿ ನೇತೃತ್ವದ ಟೀಂ ಇದೀಗ ‘ಅರ್ಪಣೆ’ ಅನ್ನೋ ವೆಬ್ ಸಿರೀಸ್ ಮುಖೇನ ಹೊಸ ಕೆಲಸಕ್ಕೆ ಮುಂದಾಗಿದೆ. ಸಧ್ಯದಲ್ಲೇ ತನ್ನ ಮೊದಲ ಪೋಸ್ಟರ್ ರಿಲೀಸ್ ಮಾಡಲಿದೆ.

Edited By : Manjunath H D
Kshetra Samachara

Kshetra Samachara

18/02/2021 11:10 am

Cinque Terre

24.63 K

Cinque Terre

0

ಸಂಬಂಧಿತ ಸುದ್ದಿ