ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾನು ಹುಟ್ಟಿ ಬೆಳೆದ ಊರು ಹುಬ್ಬಳ್ಳಿ ಸ್ವರ್ಗಕ್ಕೆ ಸಮಾನ; ನಟ ಶರಣ್

ಹುಬ್ಬಳ್ಳಿ: ಇದು ನಾನು ಹುಟ್ಟಿ ಬೆಳದ ಊರು, ನನ್ನ ಚಿಕ್ಕ ವಯಸ್ಸಿನ್ನು ಕಳೆದ ಊರು ಇದು, ಹುಬ್ಬಳ್ಳಿ ನನಗೆ ಸ್ವರ್ಗಕ್ಕೆ ಸಮಾನ. ಹುಬ್ಬಳ್ಳಿ ಊಟ, ಇಲ್ಲಿನ ಮಾತನ್ನು ಕೇಳ್ತಿದ್ದರೆ ನನ್ನ ಮೈಯಲ್ಲ ರೋಮಾಂಚನವಾಗುತ್ತದೆಂದು ನಟ ಶರಣ್ ಗಂಡು ಮಟ್ಟಿನ ನಾಡು ಹುಬ್ಬಳ್ಳಿಯನ್ನು ಹಾಡಿ ಹೊಗಳಿದ್ದಾರೆ.

ನಟ ಶರಣ್ ಅವರು ನಟನೆ ಮಾಡಿದ ಗುರು ಶಿಷ್ಯರು ಚಿತ್ರದ ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಅವರು, ನಮ್ಮ ತಂದೆಯವರ ನಾಟಕ ಕಂಪನಿ ಇಲ್ಲಿಯೇ ಇತ್ತು. ರಂಗಭೂಮಿಯೇ ನನ್ನ ಜೀವ. ಇಷ್ಟೊಂದು ಹೆಸರು ಮಾಡಿದ್ದು ರಂಗಭೂಮಿಯಿಂದಲೆಂದು ನೆನೆದುಕೊಂಡರು.

ಗುರು ಶಿಷ್ಯರು ಚಿತ್ರ ನಾನು ಇಷ್ಟ ಪಟ್ಟು ಮಾಡಿದ ಸಿನಿಮಾ ಇದು. ಹಳೆಯ ಆಟಗಳನ್ನು ನಾವು ಮರೆಯುತ್ತಿದ್ದೇವೆ. ಆ ಆಟಗಳು ಎಷ್ಟೊಂದು ಜೋಶ್ ತರುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಿದೆ. ಇದೆ ತಿಂಗಳು 23ಕ್ಕೆ ಇಡೀ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸಾಕಷ್ಟು ಜನರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂದರು.

ಇನ್ನು ಶಿಷ್ಯರ ಜೊತೆ ಶರಣ್ ಅವರು ಹಾಡು ಹೇಳಿ ಸ್ಟೆಪ್ ಕೂಡ ಹಾಕಿ ಜನರನ್ನು ಮನರಂಜಿಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2022 10:48 pm

Cinque Terre

138.04 K

Cinque Terre

3

ಸಂಬಂಧಿತ ಸುದ್ದಿ