ಹುಬ್ಬಳ್ಳಿ: ರಾಷ್ಟ್ರೀಯ ಮಟ್ಟದ ಮಿಸ್ ಊರ್ವಶಿ 2022 ಕಿರೀಟವನ್ನು ವಾಣಿಜ್ಯನಗರಿ ಹುಬ್ಬಳ್ಳಿಯ ಯುವತಿ ಮುಡಿಗೇರಿಸಿಕೊಂಡಿದ್ದು, ಹುಬ್ಬಳ್ಳಿಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾಳೆ.
ಹೌದು. ಹುಬ್ಬಳ್ಳಿಯ ವರ್ಷಿಣಿ ಎಂಬ ಯುವತಿ ಇದೇ 11ರಂದು ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯ ಮಿಸ್ ಊವರ್ಶಿ 2022 ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾಳೆ.
ಹುಬ್ಬಳ್ಳಿಯ ವರ್ಷಿಣಿ ಮಿಸ್ ಊರ್ವಶಿ 2022 ಕಿರೀಟವನ್ನು ಪಡೆದಿದ್ದು, ಜೈಪುರದ ರಾಜಬಿ ಮೊದಲ ರನ್ನರ್ ಅಪ್ ಮತ್ತು ಸಿಯಾ ರೈಟ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಬಾಲಿವುಡ್ ನಟಿ ಜರೀನ್ ಖಾನ್ ಮಾಡೆಲ್‌ಗಳಿಗೆ ಕಿರೀಟ ತೊಡಿಸಿದರು. ನಟ ವಿವೇಕ ಒಬೇರಾಯ್ ವಿಡಿಯೋ ಕಾನ್ಸರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Kshetra Samachara
16/09/2022 03:46 pm