ಹುಬ್ಬಳ್ಳಿ: ಕಣ್ಣು ಕುಕ್ಕುವ ವಿದ್ಯುದ್ದೀಪದ ಸೊಬಗು, ಕಿವಿಗಡಚಿಕ್ಕುವ ಸಂಗೀತ, ವಿವಿಧ ಮಾದರಿಯ ವಿಶಿಷ್ಟ ವಿನ್ಯಾಸದ ಉಡುಪು ಧರಿಸಿ ರ‍್ಯಾಂಪ್ ಮೇಲೆ ಮಾರ್ಜಾಲ ನಡಿಗೆ ಮಾಡಿದ ರೂಪದರ್ಶಿಯರು, ಪ್ರೇಕ್ಷಕರಿಂದ ಶಿಳ್ಳೆ- ಚಪ್ಪಾಳೆ. ಇಷ್ಟೆಲ್ಲ ಬ್ಯುಟಿಫುಲ್ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ.
Yes. ಯುವ ರೂಪದರ್ಶಿಯರಿಗೆ ಅವಕಾಶ ಕಲ್ಪಿಸಿ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ಆಯೋಜಿಸಿತ್ತು.
ಈ ಫ್ಯಾಷನ್ ಶೋದಲ್ಲಿ ಯುವತಿಯರು, ಚಿಕ್ಕ ಮಕ್ಕಳು ರೂಪದರ್ಶಿಗಳು ಮನಮೋಹಕ ಉಡುಪು ಹಾಗೂ ಅದಕ್ಕೊಪ್ಪುವ ಆಭರಣಗಳನ್ನು ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇನ್ನು ಲಲನೆಯರ ಬಿಂಕ, ಭಿನ್ನಾಣದ ನಡೆಗೆ ಮನಸೋತ ಫ್ಯಾಷನ್ ಪ್ರಿಯರು, ಕಿಕ್ಕಿರಿದು ಸೇರಿ ಸಿಳ್ಳೆ ಚಪ್ಪಾಳೆ ಸುರಿಸಿದರು.
Kshetra Samachara
17/05/2022 03:31 pm