ಹುಬ್ಬಳ್ಳಿ: ನಗರದ ಗೋಪನಕೊಪ್ಪ, ದೇವಾಂಗಪೇಟೆಯಲ್ಲಿ ಮೊಹರಂ ಹಬ್ಬ ಕೊನೆಯ ದಿನವಾದ ಇಂದು ಅಪಾರ ಭಕ್ತರ ಹರ್ಷೋದ್ಘಾರಗಳ ನಡುವೆ ಅಲೆ ದೇವರ ಮೆರವಣಿಗೆ ಭಕ್ತಿಭಾವ, ಭಾವೈಕ್ಯತೆಯಿಂದ ನಡೆಯಿತು.
ದೇವರ ದರ್ಶನ ಪಡೆದ ಭಕ್ತರು, ಬರುವ ವರ್ಷದ ಮೊಹರಂ ಹಬ್ಬದೊಳಗೆ ಇಷ್ಟಾರ್ಥ ಸಿದ್ಧಿಸಲಿ, ಸುಖ ಸಂಪತ್ತುಗಳನ್ನು ನೀಡಲಿ ಎಂದು ನಮಸ್ಕರಿಸಿ, ಹರಕೆ ತೀರಿಸಿದರೆ, ಕೆಲ ಭಕ್ತರು ಅಲಾಯಿ ಕುಣಿಗೆ ಉಪ್ಪು ಸಮರ್ಪಿಸಿದರು.
ಕಲಾ ತಂಡದಿಂದ ಮೊಹರಂ ಪದಗಳ ಹಾಡುಗಾರಿಕೆ, ಅದಕ್ಕೆ ತಕ್ಕಂತೆ ಚಿಕ್ಕ ಮಕ್ಕಳು ಹಾಕಿದ ಹೆಜ್ಜೆಮೇಳ ಮೆರವಣಿಗೆಗೆ ಮೆರಗು ತಂದಿತು. ಒಟ್ಟಾರೆ ಮೊಹರಂ ಹಬ್ಬ ಗೋಪನಕೊಪ್ಪ, ದೇವಾಂಗಪೇಟೆಯ ಹಿಂದೂ-ಮುಸ್ಲಿಂ ಭಾಂದವರ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು.
Kshetra Samachara
09/08/2022 04:32 pm