ಕುಂದಗೋಳ : ಶಾಲಾ ರಜೆ ದಿನಗಳಲ್ಲಿ ಮನೆಯಲ್ಲಿರುವ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಆಟೋಟ, ನೃತ್ಯ, ಕಲೆ, ಯೋಗ ಶಿಕ್ಷಣದ ಅರಿವನ್ನು ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಲ ಭವನ ಸೊಸೈಟಿ ನೀಡುತ್ತಿದೆ. ಇದು ಮಕ್ಕಳಲ್ಲಿ ನವೋತ್ಸಾಹವನ್ನು ಹೆಚ್ಚಿಸುತ್ತಿದೆ.
ಹೌದು ! ಕುಂದಗೋಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಭಾಭವನದಲ್ಲಿ ಮಕ್ಕಳ ಆಸಕ್ತಿ ಕೆರಳಿಸುವ ಕಲೆ, ಚಿತ್ರಕಲೆ, ಯೋಗ, ನೃತ್ಯ, ಮೂಡನಂಬಿಕೆ ಪವಾಡ ಬಯಲು, ಸೇರಿದಂತೆ ವಿವಿಧ ಜ್ಞಾನಾರ್ಜನೆಯ ಮಜಲನ್ನು 6-16 ವರ್ಷದ ಮಕ್ಕಳಿಗೆ ತಿಳಿಸಲಾಗುತ್ತಿದೆ.
ಈಗಾಗಲೇ ಬೇಸಿಗೆ ಶಿಬಿರ ತರಭೇತಿ ಪ್ರಾರಂಭವಾಗಿದ್ದು, ಮಕ್ಕಳ ಉತ್ಸಾಹಕ್ಕೆ ಸಭಾಭವನ ಭರ್ತಿಯಾಗಿದೆ. ಮಕ್ಕಳಿಗೆ ಕಲಿಕೆ ಜೊತೆ ಉಪಹಾರದ ವ್ಯವಸ್ಥೆ ಸಹ ಕಲ್ಪಿಸಲಾಗಿದ್ದು, ಮಕ್ಕಳು ರಜೆಯಲ್ಲೂ ಪಠ್ಯೇತರ ಚಟುವಟಿಕೆಗಳ ವಿವಿಧ ಆಯಾಯ ತಿಳಿಯಲು ಈ ಶಿಬಿರ ಮತ್ತಷ್ಟು ಜನಪ್ರೀಯತೆಗೆ ಶಿಶು ಅಭಿವೃದ್ಧಿ ಯೋಜನೆ ಸಾಕ್ಷಿಯಾಗಿದೆ.
Kshetra Samachara
07/05/2022 03:35 pm