ಹುಬ್ಬಳ್ಳಿ: ನಿರ್ದೇಶಕ ತರುಣ್ ಸುಧೀರ್ ಹಾಗೂ ನಟ ಶರಣ್ ಸೇರಿ ನಿರ್ಮಾಣ ಮಾಡಿರುವ ಚಿತ್ರ ಗುರು ಶಿಷ್ಯರು ಸೆ. 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ಶರಣ್ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಗುರು-ಶಿಷ್ಯರು ಟ್ರೈಲರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ನಾನು ಚಿತ್ರದಲ್ಲಿ ದೈಹಿಕ ಶಿಕ್ಷಕನ ಪಾತ್ರದಲ್ಲಿ ಅಭಿನಯಿಸಿದ್ದು, ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿದ್ದು, ಅಂತಹ ಆಟಗಳ ಪೈಕಿ ಖೋಖೋ ಕೂಡಾ ಒಂದು ಆದ್ದರಿಂದ ಚಿತ್ರದಲ್ಲಿ ಖೋಖೋ ಆಟದ ಮಹತ್ವವನ್ನು ನೋಡಬಹುದಾಗಿದೆ ಎಂದರು.
ಇನ್ನು ಚಿತ್ರದಲ್ಲಿ ಹಿರಿಯ ಕಲಾವಿದರಾದ ದತ್ತಣ್ಣ ಜೊತೆಗೆ ರಾಜ್ಯದ ಹಲವು ಶಿಕ್ಷಕರು ನಟಿಸಿದ್ದು, ಒಟ್ಟು 12 ಯುವ ನಟರು ಅಭಿನಯಿಸಿದ್ದು, ಇದರಲ್ಲಿ ಯುವ ಸ್ಟಾರ್ ನಟರ ಮಕ್ಕಳು ಇದ್ದಾರೆ ಎಂಬುದು ವಿಶೇಷ ಎಂದರು.
ಜಡೇಶ್ ಕುಮಾರ್ ಹಂಪಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದು, ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣವಿದೆ ಎಂದರು. ಈ ಹಿಂದಿನ ಎಲ್ಲ ಚಿತ್ರಗಳಿಗಿಂತ ಈ ವಿಭಿನ್ನವಾಗಿದೆ. ಈ ಚಿತ್ರದಲ್ಲಿ ಕಾಮಿಡಿ, ಹಳೇ ಆಟಗಳು ಹೀಗೆ ವಿಶೇಷವಾಗಿ ಈ ಚಿತ್ರ ಮಾಡಲಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 11:29 am