ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: "ಕರ್ತೃ ಶ್ರೀ ಜಗದ್ಗುರು ಶಿರಹಟ್ಟಿ ಫಕೀರೇಶ್ವರ ಮಹಾತ್ಮೆ" ನಾಟಕ ಉದ್ಘಾಟನೆ

ಕಲಘಟಗಿ : ರಾಷ್ಟ್ರೀಯ ಭಾವೈಕ್ಯತೆ ಸಂದೇಶವನ್ನೊಳಗೊಂಡ "ಕರ್ತೃ ಶ್ರೀ ಜಗದ್ಗುರು ಶಿರಹಟ್ಟಿ ಫಕೀರೇಶ್ವರ ಮಹಾತ್ಮೆ" ನಾಟಕದ ಪ್ರದರ್ಶನವನ್ನು ಹನ್ನೆರಡು ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನೆ ಮಾಡಿದರು.

ಶಿರೂರಿನ ವಿಶ್ವಭಾರತಿ ರಮ್ಯ ನಾಟಕ ಸಂಘದ‌ ಮಾಲೀಕ ಬಸವರಾಜ ಬೆಂಗೇರಿ ಮಾತನಾಡಿ, ನಾಟಕ ಕಂಪನಿಗಳು ‌ನಷ್ಟದಲ್ಲಿ ನಡೆಯುತ್ತಿವೆ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾವೈಕ್ಯತೆಯ ಸಂದೇಶ ಸಾರುವ ನಾಟಕ ನೋಡಿ ಪ್ರೋತ್ಸಾಹಿಸುವಂತೆ ವಿನಂತಿಸಿದರು.

ಜಾನಪದ ಕಲಾವಿದ ಎಂ ಅರ್,ತೋಟಗಂಟಿ,ರಂಗ ಕಲಾವಿದ ಗುರುಸಿದ್ದಪ್ಪ ಬಡಿಗೇರ,ಕಸಾಪ‌ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ‌ಪುರದನಗೌಡರ,ಸೋಮಲಿಂಗ ಒಡೆಯರ, ಜಿ ಎನ್ ಗಾಳಿ,ಕಲ್ಲಪ್ಪ ಮಿರ್ಜಿ, ಪ್ರಕಾಶ ಲಮಾಣಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

02/12/2020 04:30 pm

Cinque Terre

8.88 K

Cinque Terre

1