ಕಲಘಟಗಿ:ಪಟ್ಟಣದ ಹಳಿಯಾಳ ರಸ್ತೆಯ ಯುವಶಕ್ತಿ ವೃತ್ತದಲ್ಲಿ ನಿರ್ಮಿಸಲಾಗಿರು ಕಾರಂಜಿ ಹೆಸರಿಗಷ್ಟೇ ಕಾರಂಜಿಯಾಗಿದ್ದು, ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸದೇ ಧೂಳು ತಿನ್ನುತ್ತಿದೆ.
ಕಾರಂಜಿ ಹಾಗೆ ಬಿಟ್ಟ ಕಾರಣ ಧೂಳು ತಿನ್ನುತ್ತಿದೆ, ಸರಿಯಾದ ನಿರ್ವಹಣೆ ಹಾಗೂ ಕಾರಂಜಿಯ ಕೊಳದಲ್ಲಿ ನೀರು ಇಲ್ಲದೆ ಬಿಸಿಲಿನಿಂದ ಹಾಳಾಗಿ ಹೋಗುತ್ತಿದೆ.
ಪ. ಪಂ ಅನುದಾನದಲ್ಲಿ ಬಣ್ಣದ ಕಾರಂಜಿ ನಿರ್ಮಾಣ ಮಾಡಲಾಗಿದೆ.ಕಾರಂಜಿ ನಿರ್ಮಿಸಿದ ಉದ್ದೇಶವಾದರೂ ಏನು? ಎಂದು ಪಟ್ಟಣದ ಜನರು ಪ್ರಶ್ನಿಸುತ್ತಿದ್ದಾರೆ.ಅಧಿಕಾರಿಗಳು ಇನ್ನಾದರು ಕಾರಂಜಿಯನ್ನು ಪುನಃ ಪ್ರಾರಂಭಿಸುವರೇ ಎಂಬದನ್ನು ಕಾಯ್ದು ನೋಡ ಬೇಕಿದೆ.
Kshetra Samachara
28/11/2020 10:13 am